ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್ ತನ್ನನ್ನು ಕೈಬಿಟ್ಟಿದೆ ಎಂಬುದು ಅಜ್ಮಲ್‌ಗೆ ತಿಳಿದಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ತನ್ನನ್ನು ಕೈಬಿಟ್ಟಿದೆ ಎಂಬುದು ಅಜ್ಮಲ್‌ಗೆ ತಿಳಿದಿಲ್ಲ
ND
ತಾನು ಪಾಕಿಸ್ತಾನದ ಪ್ರಜೆ ಎಂದು ತನ್ನ ರಾಷ್ಟ್ರವು ಒಪ್ಪಿಕೊಂಡಿಲ್ಲ ಎಂಬುದು ಬಂಧಿತ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ತಿಳಿದಿಲ್ಲ ಎಂದು ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಕಾನೂನು ಸಹಾಯ ಕೋರುವಂತೆ ತಾನು ಬರೆದಿರುವ ಪತ್ರದ ಸ್ಥಿತಿಏನಾಯಿತು ಎಂಬುದಾಗಿ ಆತ ನಮ್ಮನ್ನು ಕೇಳುತ್ತಿದ್ದಾನೆ. ಅದರ ಪ್ರಕ್ರಿಯೆ ನಡೆಯುತ್ತಿದೆ ಎಂದು ನಾವು ಆತನಿಗೆ ಹೇಳಿದ್ದೇವೆ. ಅದಾಗ್ಯೂ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳು ಆತನಿಗೆ ತಿಳಿದಿಲ್ಲ. ಅಜ್ಮಲ್ ತನ್ನ ದೇಶದವನೆಂದು ಹೇಳಲು ದೃಢವಾದ ಪುರಾವೆ ಇಲ್ಲ ಎಂಬ ಕಾರಣ ನೀಡಿ ಆತ ತನ್ನ ಪ್ರಜೆ ಎಂಬುದಾಗಿ ಒಪ್ಪಿಕೊಳ್ಳಲು ಪಾಕಿಸ್ತಾನ ನಿರಾಕರಿಸಿದೆ ಎಂಬುದು ಆತನಿಗೆ ತಿಳಿದಿಲ್ಲ" ಎಂಬುದಾಗಿ ತನಿಖಾಧಿಕಾರಿ ಹೇಳಿದ್ದಾರೆ.

ಆತನ ಕಾನೂನು ಸಹಾಯ ಮನವಿಯ ಸ್ಥಿತಿಗತಿಯ ಕುರಿತು ನಾವು ಆತನಿಗೆ ಸೂಕ್ತ ಸಮಯದಲ್ಲಿ ಹೇಳಲಿದ್ದೇವೆ. ಇದು ನಮ್ಮ ತನಿಖಾ ವ್ಯೂಹದ ಅಂಗವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ನವೆಂಬರ್ 26ರಂದು ಮುಂಬೈಯಲ್ಲಿ ನರಮೇಧ ನಡೆಸಿದ 10 ಮಂದಿ ಉಗ್ರರಲ್ಲಿ ಉಳಿದ ಒಂಬತ್ತು ಮಂದಿ ಭದ್ರತಾ ಪಡೆಯ ಗುಂಡೇಟಿನಿಂದ ಸಾವನ್ನಪ್ಪಿದ್ದರೆ, ಅಜ್ಮಲ್ ಜೀವಂತ ಸೆರೆಸಿಕ್ಕಿರುವ ಏಕಮಾತ್ರ ಉಗ್ರನಾಗಿದ್ದಾನೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಲ್ಪಸಂಖ್ಯಾತರ ಮೇಲೆ ಕಿರುಕುಳ ಸಲ್ಲ: ಸು.ಕೋ
ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಪ್ರಮಾಣ
ಅಧಿಕ ತೂಕದ 10 ಗಗನಸಖಿಯರಿಗೆ ಪಿಂಕ್‌ಸ್ಲಿಪ್
ಭಯಂಕರ ಚಳಿಗೆ ನಡುಗುತ್ತಿರುವ ಉತ್ತರ ಭಾರತ
ಪೂಂಛ್‌: 5ನೆ ದಿನಕ್ಕೆ ಮುಂದುವರಿದ ಗುಂಡಿನ ಕಾಳಗ
ಭಾರತದಿಂದ ಪಾಕ್ ಹೈಕಮಿಷನರ್‌ಗೆ ಪುರಾವೆ ಹಸ್ತಾಂತರ