ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತುಂಬಿ ತುಳುಕುತ್ತಿರುವ ಮಧ್ಯಪ್ರದೇಶ ಜೈಲುಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುಂಬಿ ತುಳುಕುತ್ತಿರುವ ಮಧ್ಯಪ್ರದೇಶ ಜೈಲುಗಳು
ರಾಷ್ಟ್ರಾದ್ಯಂತ ಜೈಲುಗಳ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರವು 1,800 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದರೂ, ಹಲವು ರಾಜ್ಯಗಳ ಕೇಂದ್ರೀಯ ಜೈಲುಗಳು ತುಂಬಿತುಳುಕುತ್ತಿದ್ದು, ಇವುಗಳಲ್ಲಿ ಮಧ್ಯಪ್ರದೇಶದ ಜೈಲು ಮೊದಲ ಸ್ಥಾನದಲ್ಲಿದೆ.

ಮಧ್ಯಪ್ರದೇಶದ ಕೇಂದ್ರೀಯ ಜೈಲಿನಲ್ಲಿ 17,058 ಕೈದಿಗಳಿದ್ದಾರೆ. ಇವರಲ್ಲಿ 16,605 ಪುರುಷರು ಮತ್ತು 453 ಮಹಿಳಾ ಕೈದಿಗಳಿದ್ದಾರೆ. ಆದರೆ ಈ ಜೈಲಿನ ಸಾಮರ್ಥ್ಯದ ಪ್ರಕಾರ 8,290 ಕೈದಿಗಳನ್ನು ಇರಿಸಿಕೊಳ್ಳಬಹುದಾಗಿದೆ.

ಇದರ ನಂತರದ ಸ್ಥಾನ ದೆಹಲಿಯ ಕೇಂದ್ರೀಯ ಜೈಲುಗಳದ್ದು. ಇವುಗಳ ಸಾಮರ್ಥ್ಯ 4,800 ಆಗಿದ್ದರೆ, ಇಲ್ಲಿ ಬಂಧಿತರಾಗಿರುವವರ ಸಂಖ್ಯೆ 11,378 ಕೈದಿಗಳು. ಮಧ್ಯಪ್ರದೇಶ ಹಾಗೂ ದೆಹಲಿಗಳಲ್ಲಿ ತಲಾ ಎಂಟು ಕೇಂದ್ರೀಯ ಜೈಲುಗಳಿವೆ. ಮಹಾರಾಷ್ಟ್ರದ ಕೇಂದ್ರೀಯ ಜೈಲುಗಳಲ್ಲಿ 6,056 ಕೈದಿಗಳನ್ನು ಇರಿಸಲಾಗಿದೆ.

ಜೈಲಿನಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಕೈದಿಗಳ ಮತ್ತು ಜೈಲು ಸಿಬ್ಬಂದಿಗಳ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ 2002-03ರಲ್ಲಿ ಕೇಂದ್ರ ಸರ್ಕಾರವು 1,800 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

ಆದರೆ, ಈಶಾನ್ಯ ರಾಜ್ಯಗಳಲ್ಲಿನ ಜೈಲುಗಳ ಪರಿಸ್ಥಿತಿಯು ಇತರ ಜೈಲುಗಳಿಗೆ ಹೋಲಿಸಿದರೆ ಉತ್ತಮವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ತನ್ನನ್ನು ಕೈಬಿಟ್ಟಿದೆ ಎಂಬುದು ಅಜ್ಮಲ್‌ಗೆ ತಿಳಿದಿಲ್ಲ
ಅಲ್ಪಸಂಖ್ಯಾತರ ಮೇಲೆ ಕಿರುಕುಳ ಸಲ್ಲ: ಸು.ಕೋ
ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಪ್ರಮಾಣ
ಅಧಿಕ ತೂಕದ 10 ಗಗನಸಖಿಯರಿಗೆ ಪಿಂಕ್‌ಸ್ಲಿಪ್
ಭಯಂಕರ ಚಳಿಗೆ ನಡುಗುತ್ತಿರುವ ಉತ್ತರ ಭಾರತ
ಪೂಂಛ್‌: 5ನೆ ದಿನಕ್ಕೆ ಮುಂದುವರಿದ ಗುಂಡಿನ ಕಾಳಗ