ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಉಗ್ರನಿಗ್ರಹ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಉಗ್ರನಿಗ್ರಹ ಚರ್ಚೆ
ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಲಿರುವ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಯೋತ್ಪಾದನೆ, ಗುಪ್ತಚರ ಜಾಲವನ್ನು ಬಲಪಡಿಸುವಿಕೆ, ಅಣುಸ್ಥಾವರಗಳು ಸೇರಿದಂತೆ ಕರಾವಳಿಯ ಭದ್ರತೆ ಹಾಗೂ ಇನ್ನಿತರ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುವುದು.

ಸಚಿವ ಪಿ.ಚಿದಂಬರಂ ಅವರು ಗೃಹಖಾತೆಯನ್ನು ವಹಿಸಿಕೊಂಡ ಬಳಿಕ ಇಂತಹ ಸಭೆ ನಡೆಸುತ್ತಿರುವುದು ಇದು ಪ್ರಥಮವಾಗಿದೆ. ಅವರು ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಯಂತ್ರದ ಕುರಿತು ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಗುಪ್ತಚರ ಜಾಲ ಮತ್ತು ಕರಾವಳಿ ಭದ್ರತೆಯನ್ನು ಬಲಪಡಿಸುವ ಕುರಿತು ಸಭೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಲಾಗಿದೆ. ಮುಂಬೈ ದಾಳಿಕೋರರು ಸಮುದ್ರಮಾರ್ಗವಾಗಿ ಮೆಟ್ರೋಪಾಲಿಟನ್ ನಗರಕ್ಕೆ ಪ್ರವೇಶಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಅಣುಶಕ್ತಿ ಸ್ಥಾವರಗಳು ಸೇರಿದಂತೆ ಪ್ರಮುಖ ನೆಲೆಗಳ ಭದ್ರತೆಯ ಕುರಿತೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಂಕಿತರನ್ನು ಒಪ್ಪಿಸುವುದು ಪಾಕ್ ಬಾಧ್ಯತೆ: ಭಾರತ
ತುಂಬಿ ತುಳುಕುತ್ತಿರುವ ಮಧ್ಯಪ್ರದೇಶ ಜೈಲುಗಳು
ಪಾಕ್ ತನ್ನನ್ನು ಕೈಬಿಟ್ಟಿದೆ ಎಂಬುದು ಅಜ್ಮಲ್‌ಗೆ ತಿಳಿದಿಲ್ಲ
ಅಲ್ಪಸಂಖ್ಯಾತರ ಮೇಲೆ ಕಿರುಕುಳ ಸಲ್ಲ: ಸು.ಕೋ
ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಪ್ರಮಾಣ
ಅಧಿಕ ತೂಕದ 10 ಗಗನಸಖಿಯರಿಗೆ ಪಿಂಕ್‌ಸ್ಲಿಪ್