ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಗೆ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಗೆ ಆದೇಶ
ತಮಿಳ್ನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರ, ನಗರಾಭಿವೃದ್ಧಿ ಸಚಿವ ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವಂತೆ ಚುನಾವಣಾ ಆಯೋಗವು ಆದೇಶಿಸಿದೆ. ಜನವರಿ 9ರಂದು ತಿರುಮಂಗಲಂ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಇಲ್ಲಿ ಸ್ಟಾಲಿನ್ ಮತದಾರರಿಗೆ ಹಣಹಂಚಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

ಲಂಚದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಚುನಾವಣಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಸ್ಟಾಲಿನ್ ಹಣ ಹಂಚುವ ದೃಶ್ಯವನ್ನು ದೂರದರ್ಶನ ವಾಹಿನಿಗಳು ಬಿತ್ತರಿಸಿರುವ ಬಳಿಕ, ಆಡಳಿತಾರೂಢ ಡಿಎಂಕೆ ಪಕ್ಷಕ್ಕೂ ನೋಟಿಸು ನೀಡಲು ಚುನಾವಣಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಕೊಯಂಬುತ್ತೂರಿನಲ್ಲೂ ಹಣ ಹಂಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆಗೆ ನೋಟೀಸು ನೀಡುವಂತೆ ಮತ್ತು ಎಂಜಿಆರ್ ಮಂತ್ರಮ್‌‌ನ ಜಿಲ್ಲಾ ಜತೆಕಾರ್ಯದರ್ಶಿ ದಂಡಪಾಣಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಲಾಗಿದೆ.

ಏತನ್ಮಧ್ಯೆ, ಎಐಎಡಿಎಂಕೆ, ಸಿಪಿಐ ಮತ್ತು ಎಂಡಿಎಂಕೆ ಸಂಸದರ ನಿಯೋಗ ಒಂದು ಸೋಮವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಸ್ಟಾಲಿನ್ ಅವರು ಮತದಾರರಿಗೆ ಹಣ ಹಂಚುತ್ತಿರುವ ದೂರು ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಉಗ್ರನಿಗ್ರಹ ಚರ್ಚೆ
ಶಂಕಿತರನ್ನು ಒಪ್ಪಿಸುವುದು ಪಾಕ್ ಬಾಧ್ಯತೆ: ಭಾರತ
ತುಂಬಿ ತುಳುಕುತ್ತಿರುವ ಮಧ್ಯಪ್ರದೇಶ ಜೈಲುಗಳು
ಪಾಕ್ ತನ್ನನ್ನು ಕೈಬಿಟ್ಟಿದೆ ಎಂಬುದು ಅಜ್ಮಲ್‌ಗೆ ತಿಳಿದಿಲ್ಲ
ಅಲ್ಪಸಂಖ್ಯಾತರ ಮೇಲೆ ಕಿರುಕುಳ ಸಲ್ಲ: ಸು.ಕೋ
ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಪ್ರಮಾಣ