ಸದಾ ಒಂದಿಲ್ಲ ಒಂದು ಅಪಾರಾಧಿ ಸುದ್ದಿಗಳಿಂದ ಪ್ರಚಾರದಲ್ಲಿರುವ ನೋಯ್ಡಾದಲ್ಲಿ ಎಂಬಿಎ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಪೊಲೀಸರು ಮಂಗಳವಾರ ಐದು ಮಂದಿಯನ್ನು ಬಂಧಿಸಿದ್ದಾರೆ. ಇದೀಗಾಗಲೇ ಐದು ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿರುವ ಪೊಲೀಸರು ಎಲ್ಲ ಅಪರಾಧಿಗಳನ್ನು ಕಾನೂನಿನ ಕಟಕಟೆಗೆ ತರುವುದಾಗಿ ಹೇಳಿದ್ದಾರೆ.
ದೆಹಲಿಯ ಈ ವಿದ್ಯಾರ್ಥಿನಿಯನ್ನು ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುರುಳರು ನೋಯ್ಡಾದ ಸೆಕ್ಟರ್ 18ರಿಂದ ಅಪಹರಿಸಿದ್ದಾರೆ. ಈಕೆ ಅಲ್ಲಿಗೆ ತನ್ನ ಸ್ನೇಹಿತೆಯೊಂದಿಗೆ ತೆರಳಿದ್ದಳು ಎಂಬುದಾಗಿ ಉತ್ತರ ಪ್ರದೇಶ ಡಿಜಿಪಿ ವಿಕ್ರಮ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
ಆಕೆಯನ್ನು ಸೆಕ್ಟರ್ 71ಕ್ಕೆ ಬಲವಂತವಾಗಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದರು. ಬಲಿಪಶು ಹುಡುಗಿ ಎಫ್ಐಆರ್ ದಾಖಲಿಸಿದ ಬಳಿಕ ನೋಯ್ಡಾ ಪೊಲೀಸರು ಈ ಸಂಬಂಧ ಐದು ಮಂದಿಯನ್ನು ಬಂಧಿಸಿದ್ದಾರೆ. ಇವರನ್ನು ಪೊಲೀಸ್ ತಂಡ ತನಿಖೆ ನಡೆಸುತ್ತಿದೆ ಮತ್ತು ಕಾರನ್ನು ಪತ್ತೆ ಹಚ್ಚಲು ಒಂದು ಪೊಲೀಸ್ ತಂಡವನ್ನು ಕಳುಹಿಸಿರುವುದಾಗಿಯೂ ಅವರು ಹೇಳಿದ್ದಾರೆ. |