ಜನವರಿ 24ರ ದಿನವನ್ನು ರಾಷ್ಟ್ರೀಯ ಹೆಣ್ಣು ಮಗು ದಿನವಾಗಿ ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ರೇಣುಕಾ ಚೌಧುರಿ ಜನವರಿ 19ರಂದು ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.ಹೆಣ್ಣು ಭ್ರೂಣ ಹತ್ಯೆ ತಡೆ. ಲಿಂಗ ಅನುಪಾತದಗಲ್ಲಿನ ವ್ಯತ್ಯಯ, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಅಪೌಷ್ಠಿಕತೆ ಮುಂತಾದ ಪಿಡುಗುಗಳ ಮೇಲೆ ಬೆಳಕು ಚೆಲ್ಲುವ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಹೆಣ್ಣು ಮಗು ದಿನದಂಗವಾಗಿ ಸರ್ಕಾರವು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಅಲ್ಲದೆ ಇವುಗಳನ್ನು ಮಾಧ್ಯಮಗಳ ಮುಖಾಂತರ ಪ್ರಚಾರ ಮಾಡಲಿದೆ.ಸಾಮಾನ್ಯವಾಗಿ ಇಂತಹ ದಿನಾಚರಣೆಗಳನ್ನು ಅಂತಾರಾಷ್ಟ್ರೀಯ ದಿನಾಚರಣೆಯೊಂದಿಗೆ ನಿರ್ಧರಿಸಲಾಗುತ್ತದೆ. ಆದರೆ ಹೆಣ್ಣು ಮಗು ದಿನಾಚರಣೆಗೆ ಸಂಬಂಧಿಸಿದಂತೆ ಇತರೆಲ್ಲ ರಾಷ್ಟ್ರಗಳು ಪ್ರತ್ಯೇಕ ದಿನಗಳನ್ನು ಹೊಂದಿರುವುದರಿಂದ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |