ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಅನಾರೋಗ್ಯಕರ ಮಕ್ಕಳನ್ನು ಹಡೆಯಲೇ ಬೇಡಿ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅನಾರೋಗ್ಯಕರ ಮಕ್ಕಳನ್ನು ಹಡೆಯಲೇ ಬೇಡಿ'
ಹೈದರಾಬಾದ್: ಗೊತ್ತಿದ್ದೂ ಅನಾರೋಗ್ಯಕರ ಮಕ್ಕಳಿಗೆ ಜನ್ಮ ನೀಡುವಂತಹ ಹೆತ್ತವರ ವಿರುದ್ಧ ಕ್ರಮಕೈಗೊಳ್ಳುವಂತಹ ಕಾನೂನು ರೂಪಿಸಲು ಕಾಲ ಪಕ್ವವಾಗಿದೆ ಎಂದು ಆಂಧ್ರಪ್ರದೇಶ ಮಾನವ ಹಕ್ಕುಗಳ ಅಧ್ಯಕ್ಷರು ಹೇಳಿದ್ದಾರೆ.

ಪ್ರತೀಮಗುವಿಗೂ ಆರೋಗ್ಯಕರವಾಗಿ ಜನಿಸುವ ಹಕ್ಕಿದೆ. ಮಗುವು ಅನಾರೋಗ್ಯದ ಅಪಾಯ ಎದುರಿಸುತ್ತಿದೆ ಎಂಬುದು ತಿಳಿದಲ್ಲಿ ಅದನ್ನು ತಡೆಯುವ ಜವಾಬ್ದಾರಿ ಹೆತ್ತವರದ್ದು ಎಂಬುದಾಗಿ ಆಂಧ್ರಪ್ರದೇಶ ಮಾನವ ಹಕ್ಕುಗಳ ಅಧ್ಯಕ್ಷ ಬಿ.ಸುಭಾಶನ್ ರೆಡ್ಡಿ ಹೇಳಿದ್ದಾರೆಂದು ಎನ್‌ಡಿಟಿವಿ ವರದಿ ತಿಳಿಸಿದೆ.

"ಹೆತ್ತವರಿಬ್ಬರು ಅಥವಾ ಅವರಲ್ಲಿ ಯಾರಾದರೂ ಒಬ್ಬರು ಹೆಚ್ಐವಿ ಪಾಸಿಟೀವ್ ಆಗಿದ್ದರೆ, ಇಲ್ಲವೇ ಕ್ಷಯದಂತಹ ಸಾಂಕ್ರಾಮಿಕ ರೋಗ ಅಥವಾ ಕುಷ್ಟ ರೋಗ ಅಥವಾ ಇಂತಹ ಇನ್ಯಾವುದೇ ರೋಗವನ್ನು ಹೊಂದಿದ್ದರೆ ಅಂತಹವರು ಮಕ್ಕಳನ್ನೇ ಹುಟ್ಟಿಸಬಾರದು. ಅನಾರೋಗ್ಯ ಪೀಡಿತ ಮಕ್ಕಳನ್ನು ಯಾಕೆ ಹುಟ್ಟಿಸಬೇಕು" ಎಂದು ನ್ಯಾಯಮೂರ್ತಿ ರೆಡ್ಡಿ ಪ್ರಶ್ನಿಸುತ್ತಾರೆ.

ಅದೇನೇ ಇದ್ದರೂ, ವಿಶೇಷ ಮಕ್ಕಳ ಶಾಲೆ ನಡೆಸುತ್ತಿರುವ ಗೀತಾ ಕರಣ್ ಅವರ ಅಭಿಪ್ರಾಯ ಈ ಚಿಂತನೆಗೆ ವಿಭಿನ್ನವಾಗಿದೆ. ಎಲ್ಲವನ್ನೂ ಒಳಗೊಂಡಿರುವ ನಮ್ಮ ಈ ವೈವಿಧ್ಯಮಯ ಸಮಾಜದಲ್ಲಿ ಯಾವುದೇ ಸರ್ಕಾರ ಅಥವಾ ಯಾವುದೇ ಕಾನೂನು ಒಂದು ಮಗು ಜನಿಸಬೇಕೇ ಅಥವಾ ಬೇಡವೇ ನಿರ್ಧರಿಸುವಂತಿಲ್ಲ ಎಂದು ಹೇಳಿದ್ದಾರೆ. ಗೀತಾ ಅವರು ಗೀತಾಂಜಲಿ ಸಮೂಹ ಸಂಸ್ಥೆಗಳ ನಿರ್ದೇಶಕಿಯಾಗಿದ್ದಾರೆ.

"ಇದು ಮಗು ಒಂದು ಭೂಮಿಗೆ ಬರುವ ಹಕ್ಕನ್ನು ನಿರಾಕರಿಸುವುದಾಗಿದೆ. ಒಂದು ಮಗು ಸರಿಯಾಗಿಲ್ಲದಿದ್ದರೆ ಏನಾಯಿತು? ಆ ಮಗುವಿಗೆ ಇತರ ಸಾಮರ್ಥ್ಯಗಳಿರಬಹುದಲ್ಲವೇ? ಆ ಮಗು ಕೆಲವು ವಿಚಾರದ ಕೊರತೆ ಅನುಭವಿಸುತ್ತಿದ್ದರೂ, ಇನ್ನಿತರ ಸಾಮರ್ಥ್ಯ ಹೊಂದಿರಬಹುದಲ್ಲವೇ" ಎಂಬುದು ಜೀವನ ಹಕ್ಕು ಬೆಂಬಲಿಗ ಸಮೂಹದ ಮಾಧವಿ ಚಂದ್ರ ಅವರ ವಾದ.

ಮಗುವನ್ನು ಸಮಸ್ಯಗೆ ಸಿಲುಕಿಸುವ ಬದಲಿಗೆ ಲಭ್ಯವಿರುವ ವೈದ್ಯಕೀಯ ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ತಡೆಯ ಬಲ್ಲ ಖಾಯಿಲೆಗಳನ್ನು ನಿರ್ಬಂಧಿಸುವ ಮೂಲಕ ಮಗುವಿಗೆ ಉತ್ತಮ ಜೀವನವನ್ನು ಒದಗಿಸಬಹುದು ಎಂಬುದು ವೈದ್ಯರ ಅಭಿಪ್ರಾಯ.

ನೀವೇನಂತೀರಿ...?
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರು ಗುಹೆಯಲ್ಲಿ ಅವಿತಿದ್ದಾರೆ: ಸೇನೆ
ಫೆಬ್ರವರಿಯಲ್ಲಿ ಎನ್ಐಎ ಪುನರ್ ಪರಿಶೀಲನೆ?
'ಸಚಿವರನ್ನು ಬಿಡಬೇಡಿ, ಕೊಂದು ಹಾಕಿ'
ಕುಡಿದು ಚಿತ್ತಾಗಿದ್ದಾಗ 'ತಲಾಖ್' ಉಚ್ಚರಿಸಿದ್ದರೂ ಅದು ಸಿಂಧು
ಜ.24 ರಾಷ್ಟ್ರೀಯ ಹೆಣ್ಣು ಮಗು ದಿನ
ಉಗ್ರನಿಗ್ರಹಕ್ಕೆ ಮಾದರಿ ರಾಜ್ಯ ರೂಪಿಸಿ: ಮೋದಿ ಸಲಹೆ