ಭಾರತವು ಒದಗಿಸಿರುವ ಪುರಾವೆಗಳನ್ನೆಲ್ಲ ನಿರಾಕರಿಸುತ್ತಲೇ ಹೋಗುವ ಪಾಕಿಸ್ತಾನದ ಕ್ರಮವವನ್ನು ತೀವ್ರವಾಗಿ ಟೀಕಿಸಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, "ಅವರು ಏನಾದರೂ ಹೇಳಿದರೆ ಅದಕ್ಕೆ ವಿರುದ್ಧವಾದುದನ್ನೇ ಮಾಡುತ್ತಾರೆ. ಒಂದನೆ ದಿನದಿಂದಲೂ ಅವರು ನಿರಾಕರಣೆಯ ಮನೋಭಾವವನ್ನೇ ಹೊಂದಿದ್ದಾರೆ" ಎಂದು ಹೇಳಿದ್ದಾರೆ.ಪುರಾವೆಗಳ ನಿರಾಕರಣೆಗೆ ಸಂಬಂಧಿಸಿದಂತೆ ತನ್ನ ನೆರೆರಾಷ್ಟ್ರದ ಪ್ರಾಧಿಕಾರಕ್ಕೆ ಪ್ರಶ್ನೆಯೊಂದನ್ನು ಎಸೆದ ಅವರು "ನೀವದನ್ನು ಓದಿರುವಿರೇ, ನೀವದನ್ನು ಪರೀಕ್ಷಿಸಿರುವಿರೇ" ಎಂದು ಖಾರವಾಗಿ ಕೇಳಿದರು. ಪಾಕಿಸ್ತಾನದ ರಾಜಕೀಯ ಪ್ರಾಧಿಕಾರಕ್ಕೆ ಒದಗಿಸಿರುವ ಪುರಾವೆಯ ತನಿಖೆ ನಡೆಸಬೇಕಿರುವುದು ತನಿಖಾ ಸಂಸ್ಥೆಗಳ ಕಾರ್ಯವಾಗಿದೆ" ಎಂದವರು ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.ಪಾಕಿಸ್ತಾನವು ಏನನ್ನು ನೀಡಿದರೂ ಅದನ್ನು ನಿರಾಕರಿಸುವ ಮನೋಭಾವ ಹೊಂದಿದೆ. ಇಲ್ಲವಾದರೆ 24 ಗಂಟೆಗಳೊಳಗೆ ಅದು ಅಂತಿಮ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ ಅವರು, ನಿರಾಕರಣೆ ಅದರ ಜಾಯಮಾನ ಎಂದು ಹೇಳಿದರು.ಪಾಕಿಸ್ತನಾವು ಭಾರತದ ಬಳಿ ಪುರಾವೆಗಳನ್ನು ಯಾಚಿಸುತ್ತದೆ. ಪುರಾವೆ ಒದಗಿಸಿದಾಗ 24ಗಂಟೆಗೂ ಕಡಿಮೆ ಅವಧಿಯಲ್ಲಿ ಅದನ್ನು ನಿರಾಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ಅವರೂ ಹೇಳಿದ್ದಾರೆ.ಪಾಕಿಸ್ತಾನದ ಈ ನಿರಾಕರಣೆಯು ಹೇಗೆ ವಿಶ್ವಾಸಾರ್ಹ? ಇದು ಆಧಾರ ರಹಿತ ರಾಜಕೀಯ ನಿರಾಕರಣೆ ಎಂದು ಅವರು ಹೇಳಿದ್ದಾರೆ. |