ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ ಪ್ರಧಾನಿ ಪಟ್ಟ ಅಂಲಕರಿಸುವ ದಿನ ದೂರವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.ಚೆನ್ನೈಯಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ರಾಹುಲ್ ಗಾಂಧಿ ತನ್ನ ತಂದೆ ರಾಜೀವ್ ಗಾಂಧಿ ಅವರ ಹೆಜ್ಜೆಜಾಡನ್ನು ಹಿಡಿಯಬಹುದಾಗಿದೆ ಎಂದು ಹೇಳಿದರು. ರಾಷ್ಟ್ರದಲ್ಲಿ ಯಾಕೆ ಯುವನಾಯಕತ್ವ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮೇಲಿನಂತೆ ಹೇಳಿದ್ದಾರೆ. ಅಲ್ಲದೆ, ರಾಜೀವ್ ಗಾಂಧಿ ಅವರೂ ಸಹ ನಲ್ವತ್ತರ ಹರೆಯದಲ್ಲಿ ಪ್ರಧಾನಿ ಪಟ್ಟ ಏರಿದ್ದರು ಎಂಬುದನ್ನು ನೆನಪಿಸಿದರು.ಅಸ್ಸಾಂ ಗಣ ಪರಿಷತ್‌ನ ಪಿ.ಕೆ.ಮೊಹಂತಾ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಅವರುಗಳು ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಹೇಳಿದರು. |