ಜಾರ್ಖಂಡ್‌ನ ತಮರ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಮುಖ್ಯಮಂತ್ರಿ ಶಿಬು ಸೊರೇನ್, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದು, ತಾನು ಇನ್ನೊಮ್ಮೆ ಚುನಾವಣೆಗ ಸ್ಫರ್ಧಿಸವುದಾಗಿ ಹೇಳಿದ್ದಾರೆ.ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಅಜಯ್ ಮಕೇನ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿದೆ ಮಾತನಾಡುತ್ತಿದ್ದ ಅವರು, ತಾನು ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಫರ್ಧಿಸುವುದಾಗಿ ಹೇಳಿದ್ದಾರೆ. ಬಂಡುಕೋರ ಬಿಜೆಪಿ ಶಾಸಕರೊಬ್ಬರು ತಾನು ಶಿಬುಗಾಗಿ ತನ್ನ ಜಮ್ತಾರ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಚುನಾವಣೆಗಳಲ್ಲಿ ಸ್ಫರ್ಧಿಸುವುದಾಗಿ ಹೇಳಿದ್ದಾರೆ.ಜಮ್ತಾರ ಶಾಸಕ ವಿಷ್ಣು ಭಯ್ಯಾ ಅವರು ಸೊರೇನ್ ಹಾದಿ ಸುಗಮಗೊಳಿಸಲು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗರೂಜಿ(ಶಿಬು)ಗಾಗಿ ತಾನು ಸ್ಥಾನ ತೊರೆದಿರುವುದಾಗಿ ಹೇಳಿರುವ ವಿಷ್ಣು, ಮೊನ್ನೆ ನಡೆದ ತಮರಿಸ್ ಉಪಚುನಾವಣೆ ಜಾರ್ಖಂಡ್ ರಾಜಕೀಯದಲ್ಲಿ ಅಂತ್ಯವಲ್ಲ ಎಂದು ಹೇಳಿದ್ದಾರೆ.ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಶಿಬು ಅವರು ತನ್ನ ಸ್ಥಾನ ತರೆಯುತ್ತಾರೆ ಎಂದೇ ಊಹಿಸಲಾಗಿತ್ತು ಮತ್ತು ಶಿಬು ಅವರೂ ಅಂತಹ ಸೂಚನೆಗಳನ್ನೇ ನೀಡಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ವಿಷ್ಣು ಅವರ ರಂಗಪ್ರವೇಶವಾಗಿದ್ದು ಜಾರ್ಖಂಡ್ ರಾಜಕೀಯ ನಾಟಕ ಹೊಸ ತಿರುವು ಪಡೆದುಕೊಂಡಿದೆ.ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಯುಪಿಎ ಮೈತ್ರಿ ಕೂಟಕ್ಕೆ ಬೆಂಬಲ ನೀಡಿದ ಜಾರ್ಖಂಡ್ ಮುಕ್ತಿ ಮೋರ್ಚಾದ ವರಿಷ್ಠ ಶಿಬು ಅವರು ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ತನ್ನ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು. ಬಳಿಕ ಪ್ರಧಾನಿ ಸಿಂಗ್ ಅವರು ಕಳೆದ ಜುಲೈ 22ರಂದು ವಿಶ್ವಾಸಮತ ಯಾಚಿಸಿದ ವೇಳೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು.ಆದರೆ ಬಳಿಕ ಮನಸ್ಸು ಬದಲಿಸಿದ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಠಹಿಡಿದಿದ್ದರು. ಅಧಿಕಾರದಲ್ಲಿದ್ದ ಮಧು ಕೋಡಾ ಅವರನ್ನು ಎಳೆದುರುಳಿಸಿ ಕಳೆದ ಆಗಸ್ಟ್ 27ರಂದು ಶಿಬು ಸೊರೇನ್ ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಶಿಬು ಅವರು ಅಧಿಕಾರ ವಹಿಸಿಕೊಂಡು ಆರುತಿಂಗಳು ತುಂಬುವ ಮುಂಚೆ ಶಾಸನ ಸಭೆಗೆ ಆಯ್ಕೆಯಾಗಬೇಕಿದೆ. ಫೆಬ್ರವರಿ 27ಕ್ಕೆ ಶಿಬು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಆರುತಿಂಗಳಾಗುತ್ತದೆ. |