ಭಯೋತ್ಪಾದನೆಯ ಪಿಡುಗಿನ ವಿರುದ್ಧ ಹೋರಾಡಲು ವಿವಿಧ ಹಂತದಲ್ಲಿ ಮಾತುಕತೆಗಳನ್ನು ಮುಕ್ತವಾಗಿಸಬೇಕು ಎಂದು ಮುಂಚೂಣಿಯ ಮುಸ್ಲಿಂ ವಿದ್ವಾಂಸರೊಬ್ಬರು ಭಾರತ ಸರ್ಕಾರವನ್ನು ಒತ್ತಾಯಸಿದ್ದಾರೆ.
"ಸಮಾಜದ ವಿವಿಧ ಸ್ತರಗಳಲ್ಲಿ ಮಾತುಕತೆಯ ಹಾದಿಯನ್ನು ಮುಕ್ತವಾಗಿಸಬೇಕು. ಭಯೋತ್ಪಾದನೆ ಸಮಸ್ಯೆಗೆ ಮಾತುಕತೆ ಮೂಲಕ ಮಾತ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯ" ಎಂದು ಡಾ. ಮುಶಿರುಲ್ ಹಸನ್ ಅವರು ಹೇಳಿದ್ದಾರೆ. ಅವರು ರೋಟರಿ ಇಂಟರ್‌ನ್ಯಾಶನಲ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
"ನಮ್ಮ ಪೂರ್ವಜರಿಂದ ಬಂದಿರುವ ಮತ್ತು ಸಂವಿಧಾನವು ಒದಗಿಸಿರುವ ಮೌಲ್ಯಗಳನ್ನು ಕಾಪಾಡುವ ಮೂಲಕವೇ ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕಾಗಿದೆ" ಎಂದು ಅವರು ನುಡಿದರು.
ವಿವೇಚನಾ ರಹಿತ ಹಿಂಸಾಚಾರವು ನಮ್ಮನ್ನೇ ಧ್ವಂಸ ಮಾಡುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕಾಗಿ ನಾವೆಲ್ಲರೂ ಒಂದು ಸಮಾನತೆಯ ಸಮಾಜವನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಯಾವುದೇ ಕುಟುಂಬವು ಕಷ್ಟವನ್ನು ಎದುರಿಸುತ್ತದೆ. ನಮ್ಮ ರಾಷ್ಟ್ರವೂ ಸಮಸ್ಯೆಯನ್ನು ಎದುರಿಸಬಹುದು ಮತ್ತು ನಾವು ಬಹು ಸಂಪ್ರದಾಯದ ಮೇಲೆ ವಿಶ್ವಾಸವಿರಿಸಬೇಕು ಹಾಗೂ ಸಮಕಾಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಗರೂಕವಾಗಿರಬೇಕು" ಎಂದು ಅವರು ಹೇಳಿದರು. |