ಸಂಜಯ್ ದತ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ಕಾನೂನು ತೊಡಕುಂಟಾದರೆ, ಅವರಪತ್ನಿ ಮಾನ್ಯತಾ ಅವರನ್ನೇ ಲಕ್ನೋದಿಂದ ಕಣಕ್ಕಿಳಿಸಲು ಸಮಾಜವಾದಿ ಪಕ್ಷ ಮುಂದಾಗಿದೆ ಎಂದು ಪಿಟಿಐ ವರದಿ ಹೇಳುತ್ತದೆ.
ಸಂಜಯ್ ದತ್ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಅನಾನುಕೂಲವಾಗುತ್ತದೆ ಎಂದಾದರೆ, ಅವರ ಪತ್ನಿಯನ್ನು ಕಣಕ್ಕಿಳಿಸಲು ಅವಕಾಶ ನೀಡುವಂತೆ ನಾವು ಅವರ ಕುಟುಂಬವನ್ನು ವಿನಂತಿಸಲಿದ್ದೇವೆ ಎಂದು ಪಕ್ಷದ ವರಿಷ್ಠ ಅಮರ್ ಸಿಂಗ್ ಹೇಳಿದ್ದಾರೆ.
ಮುನ್ನಾಭಾಯಿ ಎಂಬಿಬಿಎಸ್ ಮತ್ತು ಲಗೇ ರಹೋ ಮುನ್ನಾಭಾಯಿ ಸಿನಿಮಾದಿಂದ ಜನಪ್ರಿಯ ಆಗಿರುವ 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸಿಲುಕಿ ಶಿಕ್ಷೆಗೀಡಾಗಿರುವ ಸಂಜಯ್ ದತ್ ಅವರನ್ನು ಸಮಾಜವಾದಿ ಪಕ್ಷವು ಲಕ್ನೋ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಗುರುವಾರ ಎಸ್ಪಿ ಹೇಳಿತ್ತು. |