ನವದೆಹಲಿ: ಮುಂಬೈದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನದ ಪ್ರಜೆ ಎಂಬುದಾಗಿ ಒಪ್ಪಿಕೊಂಡಿರುವ ಪಾಕಿಸ್ತಾನದ ಭದ್ರತಾ ಸಲಹಾಗಾರ ಮಹ್ಮೂದ್ ದುರಾನಿ ಅವರನ್ನು ವಜಾಗೊಳಿಸಿರುವುದು ದುರದೃಷ್ಟಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
"ಇದೊಂದು ದುರದೃಷ್ಟಕಾರಿ ಬೆಳವಣಿಗೆ. ನಾವು ಅಧಿಕಾರದಲ್ಲಿರುವ ಸರ್ಕಾರದೊಂದಿಗೆ ವ್ಯವಹರಿಸಬೇಕಾಗುತ್ತದೆ. ಸರ್ಕಾರದ ಕೈಯಲ್ಲಿ ನಿಜವಾದ ಅಧಿಕಾರ ಇದೆಯೋ ಇಲ್ಲವೋ ಎಂಬುದನ್ನು ತಾನು ನಿರ್ಧರಿಸುವಂತಿಲ್ಲ. ಅದು ಪಾಕಿಸ್ತಾನದ ಜನತೆ ನಿರ್ಧರಿಸಬೇಕಾಗುತ್ತದೆ, ಅದನ್ನು ಪಾಕಿಸ್ತಾನದ ಪ್ರಾಧಿಕಾರಗಳು ನಿರ್ಧರಿಸಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ. |