ರಾಹುಲ್ ಗಾಂಧಿ ಪ್ರಧಾನಿಯಾಗುವ ವಿಚಾರ ಮತ್ತೆ ಚಿಗಿತುಕೊಂಡಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಣ್ಣಗಾಗಿಸಲು ಮುಂದಾಗಿರುವ ಕಾಂಗ್ರೆಸ್, ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಣಬ್ ಮುಖರ್ಜಿ ಅವರ ಹೇಳಿಕೆಯಿಂದ ರಾಹುಲ್ ಪ್ರಧಾನಿ ಪಟ್ಟ ಏರುವ ಕುರಿತು ಚರ್ಚೆ ಮತ್ತೆ ಭುಗಿಲೆದ್ದಿತ್ತು. ಪ್ರಧಾನಿ ಪಟ್ಟದ ಸ್ಥಾನ ಖಾಲಿ ಇಲ್ಲ ಎಂಬುದಾಗಿ ಸೋನಿಯಾಗಾಂಧಿ ಕೆಲವು ದಿನಗಳ ಹಿಂದೆ ಹೇಳಿರುವುದಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಪಕ್ಷದ ವಕ್ತಾರ ಶಕೀಲ್ ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಪ್ರಣಬ್ ರಾಹುಲ್ ಪ್ರಧಾನಿಪಟ್ಟ ಏರಲು ಅರ್ಹರಾಗಿದ್ದಾರೆ ಎಂದು ಹೇಳಿದ್ದರು. |