ಪ್ರಸಕ್ತ 14ನೆ ಲೋಕಸಭೆಯ ಕೊನೆಯ ಅಧಿವೇಶನವು ಮುಂಬರುವ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಸಚಿವ ಪೃಥ್ವಿರಾಜ್ ಚೌವ್ಹಾಣ್ ಹೇಳಿದ್ದಾರೆ.ಸಂಸತ್ತಿನ ಕೊನೆಯ ಅಧಿವೇಶನವು ಮುಂದಿನ ತಿಂಗಳು 10 ದಿನಗಳ ಕಾಲ ನಡೆಯಲಿದೆ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.ಅಧಿವೇಶನವು ಫೆಬ್ರವರಿ 24 ಅಥವಾ 25ರಂದು ಕೊನೆಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ. ಮುಂದಿನ ಮಹಾ ಚುನಾವಣೆಯು ಎಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗದ ದಿನಾಂಕ ಘೋಷಣೆಗಾಗಿ ಎದುರು ನೋಡಲಾಗುತ್ತಿದೆ. |