ರಾಮಲಿಂಗಾ ರಾಜು ಸೇರಿದಂತೆ ಸತ್ಯಂ ಕಂಪ್ಯೂಟರ್ಸ್‌ನ ಮಾಜಿ ಪ್ರಮುಖ ಪ್ರತಿನಿಧಿಗಳ ಜಾಮೀನು ಅರ್ಜಿಯನ್ನು ನಗರದ ನ್ಯಾಯಾಲಯ ಒಂದು ಜನವರಿ 16ರ ತನಕ ಮುಂದೂಡಿದೆ. ಅಂತೆಯೇ ರಾಜು ಅವರನ್ನು ಪ್ರಶ್ನಿಸಲು ಅನುಮತಿ ಕೋರಿ ಸೆಬಿ ಸಲ್ಲಿಸಿರುವ ಅರ್ಜಿಯನ್ನೂ ಮುಂದೂಡಲಾಗಿದೆ.
ಜನವರಿ 16ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ರಾಜು ಅವರ ವಕೀಲ ತಿಳಿಸಿದ್ದಾರೆ. ರಾಜು ಹಾಗೂ ಬಂಧಿತ ಇತರರ ಪರ ವಾದಕ್ಕಾಗಿ 25 ವಕೀಲರ ತಂಡವನ್ನು ಒಟ್ಟು ಮಾಡಲಾಗಿದೆ ಎಂದು ವಕೀಲ ಭರತ್ ಕುಮಾರ್ ಹೇಳಿದ್ದಾರೆ.
ರಾಮಲಿಂಗಾ ರಾಜು ಜತೆಗೆ ಅವರ ಸಹೋದರ ರಾಮ ರಾಜು ಹಾಗೂ ಸತ್ಯಂ ಸಿಎಫ್ಒ ವಾಡ್ಲಮಣಿ ಶ್ರೀನಿನಾಸ್ ಅವರೂ ಜನವರಿ 23ರ ತನಕ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ರಾಜು ಹಾಗೂ ಇತರರನ್ನು ಪ್ರಶ್ನಿಸಲು ಅನುಮತಿ ನೀಡಬೇಕು ಎಂಬುದಾಗಿ ಸೆಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪ್ರತ್ಯರ್ಜಿ ಸಲ್ಲಿಸಲು ರಾಜು ವಕೀಲರು ಒಂದು ದಿನದ ಕಾಲಾವಕಾಶ ಕೇಳಿರುವ ಕಾರಣ ನ್ಯಾಯಾಲಯವು ಪ್ರಕರಣವನ್ನು ಜ.16ಕ್ಕೆ ಮುಂದೂಡಿದೆ. |