ಮುಂಬೈ ದಾಳಿಯನ್ನು ಭಾರತದ ಆರ್ಥಿಕ ಅಭಿವೃದ್ಧಿಯ ಮೇಲಿನ ನೇರದಾಳಿ ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ಹೈಡ್ರೋಕಾರ್ಬನ್ ವಲಯಗಳು ತಮ್ಮ ಆಸ್ತಿಗಳನ್ನು 'ರಾಷ್ಟ್ರ ಹಾಗೂ ರಾಷ್ಟ್ರೇತರ ದರುಳರ' ದಾಳಿಯ ಅಪಾಯದಿಂದ ರಕ್ಷಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪೆಟ್ರೋಟೆಕ್ ಸಮ್ಮೇಳನವನ್ನು ಉದ್ಘಾಟಿಸಿ ಮಾತಾಡುತ್ತಿದ್ದ ಅವರು, "ಇತ್ತೀಚಿನ ಮುಂಬೈದಾಳಿಯು ಭಾರತದ ಆರ್ಥಿಕ ಅಭಿವೃದ್ಧಿಯ ಮೇಲೆ ನಡೆಸಿರುವ ನೇರ ದಾಳಿಯಾಗಿದೆ. ಇಂತಹ ಅಕ್ಷಮ್ಯ ದಾಳಿಗಳನ್ನು ರಾಷ್ಟ್ರ ಅಥವಾ ರಾಷ್ಟ್ರರಹಿತರೆಂದು ಕರೆಸಿಕೊಂಡವರು ಯಾರೇ ಆದರೂ ಮಾಡಿದ್ದರೂ, ಇದು ರಾಷ್ಟ್ರಗಳ ಆರ್ಥಿಕ ಹಿಂಸಾಚಾರದ ಅಪಾಯವನ್ನು ಎದ್ದುಕಾಣಿಸುತ್ತದೆ" ಎಂದು ಅವರು ಅಭಿಪ್ರಾಯಿಸಿದ್ದಾರೆ.
ಇಂತಹ ಬೆದರಿಕೆಗಳಿಂದಾಗಿ ವಿಶ್ವದ ಹೈಡ್ರೋಕಾರ್ಬನ್ ವಲಯವು ಹೆಚ್ಚು ದುರ್ಬಲವಾಗುತ್ತದೆ ಎಂದು ನುಡಿದ ಅವರು, "ಇಂತಹ ಆಸ್ತಿಗಳ ರಕ್ಷಣೆಯು ಕೇವಲ ಇಂಧನ ರಫ್ತು ಮಾಡುವ ಅಥವಾ ಇಂಧನ ಗ್ರಾಹಕ ರಾಷ್ಟ್ರಗಳ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಲ್ಲ" ಎಂದು ಅವರು ಹೇಳಿದ್ದಾರೆ.
ಇಂಧನ ಪೂರೈಕೆ ಸ್ಥಿರತೆಯ ಖಚಿತತೆಗಾಗಿ ಪೂರೈಕೆ ಮಾರ್ಗ ಮತ್ತು ಹೈಡ್ರೋಕಾರ್ಬನ್ ಆಸ್ತಿಗಳ ರಕ್ಷಣೆಗಾಗಿ ಜಾಗತಿಕ ಸಮುದಾಯದ ಸಹಕಾರಕ್ಕಾಗಿ ಅವರು ಕರೆ ನೀಡಿದರು. |