ಮೇತಾಸ್ ಸಂಸ್ಥೆಯ ಹಣದ ಅವಶ್ಯಕತೆಗಾಗಿ ಕಳೆದ ಏಳು ವರ್ಷಗಳಿಂದ ತಪ್ಪು ಲೆಕ್ಕ ತೋರಿಸುತ್ತಾ ಬಂದಿರುವುದಾಗಿ, ಪೊಲೀಸ್ ತನಿಖೆಯ ವೇಳೆಗೆ ಬಂಧನದಲ್ಲಿರುವ ಸತ್ಯಂ ಕಂಪ್ಯೂಟರ್ಸ್‌ನ ಸಂಸ್ಥಾಪಕ ರಾಮಲಿಂಗಾ ರಾಜು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೈಜ ಲಾಭ ಹಾಗೂ ಕಾಲ್ಪನಿಕ ಲಾಭಗಳ ಅಂತರವು ಪ್ರತಿವರ್ಷ ಹೆಚ್ಚುತ್ತಲೇ ಹೋಗಿದೆ. ತಾನು ಯಾರಿಗೂ ಲಂಚ ನೀಡಿಲ್ಲ. ಆದರೆ ಹೆಚ್ಚಿನ ವ್ಯವಹಾರಕ್ಕಾಗಿ ಹಣವನ್ನು ಕಲೆಹಾಕಿದ್ದೆ ಎಂದು ಅವರು ಹೇಳಿದ್ದಾರೆನ್ನಲಾಗಿದೆ.
ಮಾರ್ಚ್ 2008ರ ಬ್ಯಾಲೆನ್ಸ್ ಶೀಟಿನಲ್ಲಿ ತೋರಿಸಿರುವಂತೆ ಪ್ರಸಕ್ತ ಸತ್ಯಂ ಬಳಿ ಯವುದೇ ನಗದು ಮೀಸಲು ಇಲ್ಲ. ಇದರಲ್ಲಿ 5,700 ಕೋಟಿ ನಗದು ಮೀಸಲು ಇರುವುದಾಗಿ ಹೇಳಲಾಗಿತ್ತು.
ಗ್ರಾಹಕರು ಮತ್ತು ಸಾಲಗಾರರ ನಂಬುಗೆಗೆ ಅರ್ಹವೆನಿಸುವ ವ್ಯವಸ್ಥಾಪನೆಯೊಂದರ ಅವಶ್ಯಕತೆ ಸಂಸ್ಥೆಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಲ್ಲದೆ ಇದೀಗ ನೇಮಿಸಲಾಗಿರುವ ಮಧ್ಯಂತರ ಸಿಇಒ ಮೈನಾಂಪತಿ ಅವರನ್ನು ಉಚ್ಚಾಟಿಸುವುದಾಗಿ ಮೂಲಗಳು ಹೇಳಿವೆ. ಮೈನಾಂಪತಿ ವೇತನ ಹಾಗೂ ಇತರ ಭತ್ಯೆಗಳ ಹೆಸರಿನಲ್ಲಿ ಸಂಸ್ಥಾಪಕ ರಾಮಲಿಂಗಾ ರಾಜು ಅವರಿಗಿಂತಲೂ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದರು. |