"ಬ್ಯಾಂಕ್ ಠೇವಣಿಗಳನ್ನೆಲ್ಲ ರಾಜು ಅವರೇ ನಿಭಾಯಿಸುತ್ತಿದ್ದು, ಈ ವಿಚಾರಕ್ಕೆ ಕೈ ಹಾಕಬಾರದು ಎಂದು ತನಗೆ ನಿರ್ದಿಷ್ಟವಾಗಿ ಹೇಳಲಾಗಿತ್ತು" ಎಂದು ಬಂಧನಕ್ಕೀಡಾಗಿರುವ ಸತ್ಯಂ ಕಂಪ್ಯೂಟರ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಹೇಳಿದ್ದಾರೆ.
ಪೊಲೀಸರಿಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, "ಕಂಪೆನಿಯ ಲೆಕ್ಕಪರಿಶೋಧಕರು ತಮ್ಮ ಚರ್ಚೆಯ ವೇಳೆ ಯಾವತ್ತೂ ಈ ಕೊರತೆಯ ಬಗ್ಗೆ ಚರ್ಚೆಯನ್ನು ನಡೆಸಿಲ್ಲ. ಈ ಕಾಲ್ಪನಿಕ ನಿರಖು ಠೇವಣಿಯನ್ನು ಮ್ಯಾನೇಜ್‌ಮೆಂಟ್ ಮತ್ತು ಲೆಕ್ಕಪರಿಶೋಧನಾ ವಿಭಾಗದ ನಡುವಿನ ತಿಳುವಳಿಕೆಯೊಂದಿಗೆ ನಿಭಾಯಿಸಲಾಗಿತ್ತು" ಎಂದು ಆಪಾದಿಸಿದ್ದಾರೆ.
ಪ್ರೈಸ್‌ವಾಟರ್ ಕೂಪರ್ಸ್ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯ ಲೆಕ್ಕಪರಿಶೋಧನೆ ನಡೆಸುತ್ತದೆ.
ರಾಜು ಅವರೂ ತನ್ನ ಹೇಳಿಕೆಯಲ್ಲಿ, ತಾನು ಮತ್ತು ತನ್ನ ಸಹೋದರ ನಿರ್ಣಯಗಳನ್ನು ಕೈಗೊಂಡು ತಮ್ಮ ಸೂಚನೆಯಂತೆ ನಡೆದುಕೊಳ್ಳಲು ಹಣಕಾಸು ಅಧಿಕಾರಿಗೆ ಹೇಳಲಾಗಿತ್ತು ಮತ್ತು ಲೆಕ್ಕಪುಸ್ತಕಗಳನ್ನು ಕಳೆದ ಏಳು ವರ್ಷಗಳ ಕಾಲ ತಿರುಚಲಾಗಿದೆ ಎಂದು ಹೇಳಿದ್ದರು. |