ತಮ್ಮ ಆರೋಗ್ಯ ಸ್ಥಿರವಾಗಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ ಭಾರತೀಯ ಜನತಾ ಪಕ್ಷದಲ್ಲಿ ತಲ್ಲಣ ಉಂಟು ಮಾಡಿದ್ದ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು, ತಾವು ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಪ್ರಧಾನಿ ಪಟ್ಟದ ಪೈಪೋಟಿ ಅಭ್ಯರ್ಥಿ ಎಂದು ಯಾವತ್ತೂ ಹೇಳಿಲ್ಲ ಮತ್ತು ಇದು ಮಾಧ್ಯಮದ ಪ್ರಚಾರ ಎಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಕೋಟಾಗೆ ಭೇಟಿ ನೀಡಿದ ಶೇಖಾವತ್ ಅವರು, ಲೋಕಸಭೆಗೆ ಸ್ಪರ್ಧಿಸಲು ಜನರು ತಮ್ಮನ್ನು ಒತ್ತಾಯಿಸಿದ್ದರಿಂದ ನಾನು ಆ ಕುರಿತು ತೀರ್ಮಾನಿಸಿದ್ದೇನೆ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಆರೋಗ್ಯದ ಮೇಲೆ ಅವಲಂಬನೆಯಾಗಿದೆ ಎಂದು ತಿಳಿಸಿದರು.
ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೊಡುವಂತೆ ನಾನು ಯಾರನ್ನೂ ಸಹ ಸಂಪರ್ಕಿಸಿಲ್ಲ ಮತ್ತು ನಾನು ಯಾವ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎಂಬುದು ಜನರ ಬಯಕೆ ಮೇಲೆ ನಿರ್ಧಾರವಾಗಲಿದೆ ಎಂದು ಹೇಳಿದರು. |