ನವದೆಹಲಿ: ಭಾರತದಾದ್ಯಂತ ದಾಳಿ ನಡೆಸಲು ಲಷ್ಕರೆ-ಇ-ತೋಯ್ಬಾ ಸಂಘಟನೆಯು 32 ಜಿಹಾದಿಗಳ ಪಡೆಯನ್ನು ಸಿದ್ಧಪಡಿಸಿ ತರಬೇತಿ ನೀಡಿದೆ ಎಂಬುದಾಗಿ ಮುಂಬೈದಾಳಿಕೋರ ಅಜ್ಮಲ್ ಅಮೀರ್ ಕಸಬ್ ತನಿಖೆಯ ವೇಳೆ ಹೇಳಿದ್ದಾನೆ.
ಕಸಬ್ ಪ್ರಕಾರ, ಈ 32 ಮಂದಿಯಲ್ಲಿ 15 ಮಂದಿ ಸ್ವಯಂ ಆಗಿ ಫಿದಾಯಿನ್ ದಾಳಿನ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದ್ದರು.
ಆದರೆ, ಆತನ ಈ ಹೇಳಿಕೆಯು ನೈಜ ಫಿದಾಯಿನ್‌ಗಳ ಕಡೆಯಿಂದ ಗಮನವನ್ನು ಬೇರೆಡೆ ಹರಿಸಲು ಮಾಡುವ ಪ್ರಯತ್ನವಿರಬಹುದು ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ.
ಜಮ್ಮು ಕಾಶ್ಮೀರದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗಿರುವ ಆರು ಉಗ್ರರು ಇದೇ ಫಿಜಾಯಿನ್ ಸಮೂಹಕ್ಕೆ ಸೇರಿದ್ದವರು ಎಂದು ಹೇಳಿದ್ದಾನೆ. ಆತ ಇದನ್ನು ಜಮಾತ್ ಉದ್ ದಾವಾದ ಅಧಿಕೃತ ಪ್ರಕಟಣೆಯನ್ನು ಉಲ್ಲೇಖಿಸುತ್ತಾ ತಿಳಿಸಿದ್ದಾನೆ.
ಸಾವನ್ನಪ್ಪಿರುವ ಜಿಹಾದಿ ಉಗ್ರರು ತನ್ನೊಂದಿಗೆ ಲಷ್ಕರೆ ಶಿಬಿರದಲ್ಲಿ ತರಬೇತಿ ಪಡೆದಿರುವುದಾಗಿ ಆತ ಹೇಳಿದ್ದಾನೆನ್ನಲಾಗಿದೆ.
|