ರಾಂಚಿ: ಜಾರ್ಖಂಡ್ ಉಸ್ತುವಾರಿ ಮುಖ್ಯಮಂತ್ರಿ ಶಿಬು ಸೊರೇನ್ ಅವರು ದಿಢೀರ್ ಅಸ್ವಸ್ಥಗೊಂಡ ಕಾರಣ ಅವರನ್ನು ಇಲ್ಲಿನ ಖಾಸಗೀ ಆಸ್ಪತ್ರೆಗೆ ಸೇರಿಸಲಾಗಿದೆ.
ಇದ್ದಕ್ಕಿದ್ದಂತೆ ನಿತ್ರಾಣಗೊಂಡ ಅವರು ಉಸಿರಾಡಲು ತೊಂದರೆಯಾಗುತ್ತಿದೆ ಎಂದು ದೂರಿಕೊಂಡಿದ್ದು, ಅವರನ್ನು ತಕ್ಷಣವೇ ಇಲ್ಲಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು ಎಂಬುದಾಗಿ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಸೊರೇನ್ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು. ಅವರು ತನ್ನ ಉತ್ತರಾಧಿಕಾರಿ ಆಯ್ಕೆಯ ಸಲುವಾಗಿ ಮಂಗಳವಾರ ದೆಹಲಿಗೆ ತೆರಳಬೇಕಿತ್ತು. |