ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನೆಯಲ್ಲಿ 'ಮುಂಬೈ ಹೀರೋಗಳು' ಪ್ರಮುಖ ಆಕರ್ಷಣೆ. ರಾಷ್ಟ್ರೀಯ ಭದ್ರತಾ ಪಡೆಯು(ಎನ್‌ಎಸ್‌ಜಿ) ಗಣರಾಜ್ಯೋತ್ಸವದಲ್ಲಿ ಇತರ ಸಮವಸ್ತ್ರ ಸೇವಾ ಸಿಬ್ಬಂದಿಗಳೊಡನೆ ರಾಜ್‌ಪಥ್‌ನಲ್ಲಿ ಜನವರಿ 26ರಂದು ಮೊದಲ ಬಾರಿ ಹೆಜ್ಜೆ ಹಾಕುತ್ತಲಿದೆ.
ಎನ್ಎಸ್‌ಜಿಯ ಸುಮಾರು 25 ವರ್ಷಗಳ ಇತಿಹಾಸದಲ್ಲಿ ಪ್ರಥಮಬಾರಿಗೆ ಪಥಸಂಚಲನ ತುಕಡಿಯು ಇತರ ತುಕಡಿಗಳೊಂದಿಗೆ ಹೆಜ್ಜೆ ಹಾಕಲಿವೆ ಎಂಬುದಾಗಿ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಇದುವರೆಗೆ ಗಣರಾಜ್ಯೋತ್ಸವದಲ್ಲಿ ಎನ್ಎಸ್‌ಜಿ ಪಾತ್ರ ಸಮಾರಂಭದಲ್ಲಿ ಭಾಗವಸುವ ಗಣ್ಯಾತಿಗಣ್ಯರಿಗೆ ಭದ್ರತೆ ಒದಗಿಸಲು ಮಾತ್ರ ಮೀಸಲಾಗಿತ್ತು.
ಎನ್ಎಸ್‌ಜಿಯನ್ನು 1984ರಲ್ಲಿ ಹುಟ್ಟುಹಾಕಲಾಗಿದ್ದು, ಭಯೋತ್ಪಾದಕರ ವಿರುದ್ಧ ಹೋರಾಟ ಮತ್ತು ರಾಷ್ಟ್ರದ ಉನ್ನತ ರಾಜಕೀಯ ನಾಯಕರ ರಕ್ಷಣಾ ಜವಾಬ್ದಾರಿಯ ಕಾರ್ಯವನ್ನು ವಹಿಸಲಾಗಿದೆ.
ಶಿಫಾರಸ್ಸು ಮಾಡಲಾಗಿರುವ ಸಿಬ್ಬಂದಿಗಳು ಸೇರಿದಂತೆ ಸರ್ಕಾರವು 14 ಭದ್ರತಾ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ನೀಡಲಿದೆ ಎಂದು ಮೂಲಗಳು ಹೇಳಿದೆ.
ಒಂಬತ್ತು ಮಂದಿಗೆ ಅಶೋಕ ಚಕ್ರ ಮತ್ತು ಇತರ ಐವರಿಗೆ ಸೂರ್ಯ ಚಕ್ರ ಮತ್ತು ಕೀರ್ತಿ ಚಕ್ರ ನೀಡಲಾಗುವುದು ಎಂಬುದಾಗಿ ಮೂಲಗಳು ಹೇಳಿವೆ. ನವೆಂಬರ್ 26ರಂದು ಉಗ್ರರು ಮುಂಬೈಮೇಲೆ ದಾಳಿ ನಡೆಸಿ, ಒಬೇರಾಯ್, ತಾಜ್, ನಾರಿಮನ್ ಹೌಸನ್ನು ಆಕ್ರಮಿಸಿಕೊಂಡು ನರಮೇಧ ನಡೆಸಿದ ವೇಳೆ ಉಗ್ರರ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ ಎನ್‌ಎಸ್‌ಜಿ ಉಗ್ರರ ಅಟ್ಟಹಾಸಕ್ಕೆ ಇತಿಶ್ರೀ ಹಾಡಿತ್ತು. |