ಮುಂಬೈ: 26/11ರ ಮುಂಬೈ ದಾಳಿಯ ವೇಳೆಗೆ ಉಗ್ರರ ಗುಂಡಿಗೆ ಬಲಿಯಾದ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಅವರಿಗೆ ಉಗ್ರರೊಂದಿಗಿನ ಹೋರಾಟದ ಕೀರ್ತಿಯನ್ನು ಸಲ್ಲಿಸುತ್ತಿಲ್ಲ ಎಂದು ಮೃತ ಅಧಿಕಾರಿಯ ಪತ್ನಿ ವಿನಿತಾ ಕಾಮ್ಟೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ತಾನೇ ಸ್ವಯಂ ನಡೆಸಿರುವ ತನಿಖೆಯಲ್ಲಿ, ತನ್ನ ಪತಿ ಕಸಬ್ ಮೇಲೆ ಗುಂಡೆಸೆದಿರುವುದಾಗಿ ತಿಳಿದು ಬಂದಿದೆ, ಆದರೆ ಪೊಲೀಸರು ಅದರ ಕೀರ್ತಿಯನ್ನು ಕಾಮ್ಟೆಯವರಿಗೆ ನೀಡುತ್ತಿಲ್ಲ" ಎಂದು ವಿನಿತಾ ದೂರಿದ್ದಾರೆ.
ಪೊಲೀಸರು ಹೆಚ್ಚಿನ ಪಡೆಗಳನ್ನು ದಾಳಿಯ ಸ್ಥಳಕ್ಕೆ ಕಳುಹಿಸಲು ತುಂಬಾ ಸಮಯ ತೆಗೆದುಕೊಂಡಿರುವ ಕಾರಣ, ಸ್ಥಳದಲ್ಲಿದ್ದ ಕಾಮ್ಟೆ ಹಾಗೂ ಅವರ ತಂಡವು ಸಾಧ್ಯವಿರುವುದನ್ನು ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆಂದು ಖಾಸಗಿ ವಾಹಿನಿಯೊಂದರ ವರದಿ ತಿಳಿಸಿದೆ.
|