ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಧ್ಯಮಗಳ ಕುಟುಕು ಕಾರ್ಯಾಚರಣೆಗೆ ಕುಟುಕಿದ ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಧ್ಯಮಗಳ ಕುಟುಕು ಕಾರ್ಯಾಚರಣೆಗೆ ಕುಟುಕಿದ ಸು.ಕೋ
PTI
ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಕುಟುಕು ಕಾರ್ಯಾಚರಣೆ ಪೃವೃತ್ತಿಯ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ಸೂಚಿಸಿದ್ದಾರೆ.

ಇಂತಹ ಕಾರ್ಯಾಚರಣೆಯಿಂದ ವ್ಯಕ್ತಿಗಳನ್ನು ನ್ಯಾಯಾಲಯದ ವಿಚಾರಣೆಗೆ ತರುವ ಮುನ್ನವೆ, ಅವರು ಸಾರ್ವಜನಿಕರ ದೃಷ್ಟಿಯಲ್ಲಿ ದೋಷಿಗಳಾಗಿ ಬಿಂಬಿಸಲ್ಪಡುತ್ತದೆ ಎಂದು ಪ್ರಕರಣದ ವಿಚಾರಣೆಯೊಂದರಲ್ಲಿ ಅಭಿಪ್ರಾಯಿಸಲಾಗಿದೆ.

"ನಾಳೆ ನೀವಲ್ಲಿರಬಹುದು. ಇದು ನಮ್ಮಲ್ಲಿ(ನ್ಯಾಯಾಧೀಶರಲ್ಲಿ) ಒಬ್ಬರೂ ಆಗಿರಬಹುದು" ಎಂದು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಇಂತಹ ಕಾರ್ಯಾಚರಣೆಗಳನ್ನು ಪ್ರಸ್ತಾಪಿಸುತ್ತಾ ಹೇಳಿದ್ದಾರೆ.

ಬಿಎಂಡಬ್ಲ್ಯೂ ಸ್ಟಿಂಗ್ ಆಪರೇಶನ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದ ಓರ್ವ ಸದಸ್ಯ ಇವರಾಗಿದ್ದಾರೆ. ನ್ಯಾಯಪೀಠವು ನ್ಯಾಯಾಮೂರ್ತಿಗಳಾದ ಬಿ.ಎನ್.ಅಗರ್ವಾಲ್ ಮತ್ತು ಆಫ್ತಾಬ್ ಅಲಂ ಅವರನ್ನೂ ಒಳಗೊಂಡಿದೆ. ಹಿರಿಯ ವಕೀಲರಾದ ಆರ್.ಕೆ.ಆನಂದ್ ಅವರನ್ನು ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಅವರು ನಡೆಸುತ್ತಿದ್ದರು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಒಬ್ಬ ವ್ಯಕ್ತಿಯ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಉಲ್ಲಂಘಿಸುವಂತಹ ಯುಕ್ತಿಯನ್ನು ಬಳಸುವಂತಹ ತಂತ್ರಗಳನ್ನು ಆರಂಭಿಸಿದ್ದು, ಈ ಕುರಿತು ಪ್ರತಿಯೊಬ್ಬರು ಆಲೋಚಿಸುವಂತಹ ಕಾಲ ಪಕ್ವವಾಗಿದೆ ಎಂದು ಅವರು ನುಡಿದರು.
ನಿಮ್ಮ(ಆನಂದ್) ಪ್ರಕರಣದಲ್ಲಿ ಸಾರ್ವಜನಿಕ ತೀರ್ಪು ಆಗಲೇ ನೀಡಿಯಾಗಿದೆ ಎಂದು ಸಿಂಘ್ವಿ ನುಡಿದರು.

ಆನಂದ್ ಪರ ವಾದ ಮಂಡಿಸಿದ ಆಫ್ತಾಬ್ ಅಹ್ಮದ್ ಅವರು ಇಂತಹ ಕಾರ್ಯಚರಣೆಗಳನ್ನು ದೂರುತ್ತಾ, ಮಾಧ್ಯಮಗಳು ಸಂಸತ್ತನ್ನೂ ಹೊರತುಪಡಿಸಿಲ್ಲ ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು.

ಬಿಎಂಡಬ್ಲ್ಯೂ ಹಿಟ್ ಆಂಡ್ ರನ್ ಪ್ರಕರಣದ ಪ್ರಮುಖ ಸಾಕ್ಷ್ಯಿ ಸುನಿಲ್ ಕುಲಕರ್ಣಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ಆನಂದ್ ಹಾಗೂ ಐ.ಯು.ಖಾನ್ ಅವರುಗಳು ತಪ್ಪಿತಸ್ಥರೆಂದು ತೀರ್ಮಾನಿಸಿದ್ದ ಹೈಕೋರ್ಟ್ ಇವರಿಬ್ಬರಿಗೆ ನಾಲ್ಕು ತಿಂಗಳ ನಿಷೇಧ ಹೇರಿತ್ತು.

ಹೈಕೋರ್ಟ್ ಟಿವಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯನ್ನು ಆಧಾರವಾಗಿಸಿ ಈ ತೀರ್ಪು ನೀಡಿದೆ ಎಂದು ಆನಂದ್ ತನ್ನ ಮನವಿಯಲ್ಲಿ ವಾದಿಸಿದ್ದಾರೆ.

ಆನಂದ್ ಮತ್ತು ಖಾನ್ ಅವರು ಸಾಕ್ಷಿಗಗಳ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಆರೋಪ ಎದುರಿಸುತ್ತಿದ್ದಾರೆ.

ಬಿಎಂಡಬ್ಲ್ಯೂ ಪ್ರಕರಣದ ಅಪರಾಧಿಯಾಗಿರುವ ಸಂಜೀವ್ ನಂದಾ ವಿರುದ್ಧ ಸಾಕ್ಷಿಹೇಳದಂತೆ ಕುಲಕರ್ಣಿ ಮೇಲೆ ಪ್ರಭಾವ ಬೀರಲಾಗಿದೆ ಎಂದು ಆರೋಪಿಸಲಾಗಿದೆ. ವಕೀಲ ಆನಂದ್ ನಂದಾ ಪರವಾಗಿ ವಾದಿಸಿದ್ದರೆ, ಖಾನ್ ಸರ್ಕಾರಿ ವಕೀಲರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಿಯಾಂಕ ಗಾಂಧಿ ಸ್ಪರ್ಧೆ
ಪಾಕ್ ಮೇಲೆ ಒತ್ತಡ
ಪಾಕ್‌ನೊಂದಿಗೆ ಎಲ್ಲಾ ಸಂಪರ್ಕ ಕಡಿತ: ಚಿದು
ಕಸಬ್‌ಗೆ ಗುಂಡೆಸೆದಿದ್ದು ತನ್ನ ಪತಿ: ಕಾಮ್ಟೆ ಪತ್ನಿ
ಕಳ್ಳಸಾಗಣೆ: 'ನುಂಗಣ್ಣ'ಗಳಿಗೆ ಹೆಚ್ಚಿನ ಅವಕಾಶ!
ಜಪಾನಿನಲ್ಲಿ ಲಾಲೂ@300 ಕಿಮೀ ರೈಲು