ಜಮ್ಮು ಕಾಶ್ಮೀರದಲ್ಲಿರುವ ಹಲವಾರು ಉಗ್ರಗಾಮಿ ಸಂಘಟನೆಗಳ ಸಂಯೋಜಕನಾಗಿದ್ದ ಮತ್ತು ಉಗ್ರವಾದದ ಸಂಸ್ಥಾಪಕರಲ್ಲಿ ಒಬ್ಬನಾಗಿರುವ ಅಹ್ಸಾನ್ ಧಾರ್‌ನನ್ನು ಬುಧವಾರ ಉತ್ತರ ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈತ ಹಿಜ್ಬುಲ್ ಮುಜಾಹಿದೀನ್‌ನ ಪ್ರಥಮ ವರಿಷ್ಠ ಕಮಾಂಡರ್ ಹಾಗೂ ಮುಸ್ಲಿಂ ಮುಜಾಹಿದೀನ್(ಎಂಎಂ)ನ ಸಂಸ್ಥಾಪಕನಾಗಿದ್ದು ಪ್ರಸಕ್ತ ವಿವಿಧ ಉಗ್ರಗಾಮಿ ಸಂಘಟನೆಗಳ ಮುಖ್ಯ ಸಂಯೋಜಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಈತನ ಬಂಧನ ಬಹುದೊಡ್ಡ ಘಟನೆ ಎಂದು ಉತ್ತರ ಕಾಶ್ಮೀರದ ಡಿಐಜಿ ಅಬ್ದುಲ್ ಗನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. |