ಸತ್ಯಂನ ಮಧ್ಯಂತರ ಸಿಇಒ ರಾಮ್ ಮೈನಾಂಪತಿ ಮಾತ್ರ ಜಾಗಖಾಲಿ ಮಾಡಿದವರಲ್ಲ. ಇತರ ಇಬ್ಬರು ಉನ್ನತಾಧಿಕಾರಿಗಳೂ ಬೇರೆ ದೇಶದಲ್ಲಿ ಹೋಗಿ ಕುಳಿತಿದ್ದಾರೆ.
ಸೀನಿಯರ್ ವೈಸ್ ಪ್ರೆಸಿಡೆಂಟ್ ಹಾಗೂ ಡೈರೆಕ್ಟರ್ ವೀರೇಂದ್ರ ಅಗರ್ವಾಲ್ ಅವರು ಸಿಂಗಾಪುರಕ್ಕೆ ತೆರಳಿದ್ದರೆ, ಇನ್ನೊಬ್ಬ ಸೀನಿಯರ್ ವೈಸ್ ಪ್ರೆಸಿಡೆಂಟ್ ಹಾಗೂ ಡೈರೆಕ್ಟರ್ ಕೇಶುಬ್ ಪಾಂಡಾ ಅವರು ಲಂಡನ್‌ಗೆ ತೆರಳಿದ್ದಾರೆ.
ಅಮೆರಿಕದಲ್ಲಿ ಹೋಗಿ ಕುಳಿತಿರುವ ಮೈನಾಂಪತಿ ಅಮೆರಿಕ ಪ್ರಜೆ. ಅವರೆಲ್ಲ ಕುಟುಂಬದ ಸದಸ್ಯರೂ ಅಮೆರಿಕ ಪಾಸ್‍ಪೋರ್ಟ್‌ಗಳನ್ನು ಹೊಂದಿದ್ದಾರೆ.
ಈ ಮೂವರೂ ಅಧಿಕಾರಿಗಳೂ ಗ್ರಾಹಕರ ನಂಬುಗೆಯನ್ನು ಮರುಗಳಿಸಲು ಹಾಗೂ ಬಾಕಿಯುಳಿದಿರುವ ಬಿಲ್ ಸಂಗ್ರಹಕ್ಕಾಗಿ ವಿದೇಶಗಳಿಗೆ ತೆರಳಿದ್ದಾರೆ ಎಂದು ಸತ್ಯಂನೊಳಗಿನವರು ಹೇಳುತ್ತಾರೆ.
ಆದರೆ, ಪೊಲೀಸ್ ತನಿಖೆ ಹಾಗೂ ಇತರ ನಿಯಂತ್ರಣಾ ಮಂಡಳಿಗಳ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ದೇಶತೊರೆದಿರಬಹುದು ಎಂಬುದಾಗಿ ಸತ್ಯಂ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆನ್ನಲಾಗಿದೆ. ಅಲ್ಲದೆ ಮೈನಾಂಪತಿ ಮತ್ತೆ ಮರಳುವ ಸಾಧ್ಯತೆ ಅತ್ಯಲ್ಪ ಎಂದೂ ಹೇಳಲಾಗಿದೆ. |