ಕೇರಳದ ಮರಾಡ್ ನರಮೇಧ ಪ್ರಕರಣದ ವಿಚಾರಣೆ ನಡೆಸಿರುವ ಕೋಜಿಕೋಡ್ ವಿಶೇಷ ನ್ಯಾಯಾಲಯ 63 ಅಪರಾಧಿಗಳಲ್ಲಿ 62 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2003ರ ಮೇ 2ರ ರಾತ್ರಿ ಮರಾಡ್ ಬೀಚ್‌ನಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಎಂಟು ಮಂದಿ ಹಿಂದೂ ಮೀನುಗಾರರನ್ನು ಬರ್ಬರವಾಗಿ ಹತ್ಯೆಗೈದಿತ್ತು. ಈ ದಾಳಿಯಲ್ಲಿ ಒಬ್ಬ ಹಂತಕ ಸಾವಿಗೀಡಾಗಿದ್ದನು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 139 ಆರೋಪಿಗಳಿದ್ದರು. ಡಿಸೆಂಬರ್ 2008ರಲ್ಲಿ ಹೆಚ್ಚುವರಿ ಸತ್ರ ನ್ಯಾಯಾಧೀಶ ಬಾಬು ಮಾಥ್ಯೂ ಪಿ ಜೋಸೆಪ್ 62 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದ್ದರು ಇನ್ನೊರ್ವ ಈ ಅಪರಾಧಕ್ಕೆ ಒತ್ತಾಸೆ ನೀಡಿದ ಅಪರಾಧಿ ಎಂದು ತೀರ್ಮಾನಿಸಿದರೆ ಉಳಿದವರನ್ನು ಖುಲಾಸೆ ಮಾಡಿದ್ದರು.
|