ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಉಗ್ರರ ಪ್ರತ್ಯಕ್ಷದರ್ಶಿ ಮಹಿಳೆ ಅನಿತಾ ಉದಯ್ ಅವರನ್ನು ಅಮೆರಿಕಕ್ಕೆ ಕರೆದೊಯ್ದಿರುವ ಎಫ್‌ಬಿಐ ಅಧಿಕಾರಿಗಳು ಒಂದೆರಡು ತಾಸುಗಳ ವಿಚಾರಣೆ ನಡೆಸಿ ಮಾಹಿತಿ ಪಡೆದು ಕೊಂಡಿದ್ದಾರೆ.
ಕಳೆದ ಭಾನುವಾರದಿಂದ ಕಾಣೆಯಾಗಿದ್ದ ಅನಿತಾ ಬಳಿಕ ಬುಧವಾರ ಮರಳಿ ಬಂದಿದ್ದರು. ಮೊದಲಿಗೆ ಅವರು ತಾನು ತನ್ನ ಸತಾರದಲ್ಲಿರುವ ಸಹೋದರಿಯ ಮನೆಗೆ ತೆರಳಿದ್ದೆ ಎಂದು ಹೇಳಿದ್ದರು.
ಆದರೆ ಗುರುವಾರ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿರುವ ಅನಿತಾ ತನ್ನನ್ನು ಅಮೆರಿಕದ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ. ಅಲ್ಲದೆ, ಅಮೆರಿಕ ಅಧಿಕಾರಿಗಳು ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದಿದ್ದ ಕಾರಣ ತಾನು ಪೊಲೀಸರಿಗೆ ಸುಳ್ಳು ಹೇಳಬೇಕಾಯಿತು ಎಂದು ತಿಳಿಸಿದ್ದಾರೆನ್ನಲಾಗಿದೆ. |