ಸಂಜಯ್ ದತ್ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಇಷ್ಟವಿಲ್ಲದಿದ್ದರೆ, ಅವರನ್ನು ಒತ್ತಾಯಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.ತಾನು ಸಂಜಯ್ ದತ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿರುವ ಸಿಂಗ್, "ಚುನಾವಣೆಯಲ್ಲಿ ಸ್ಫರ್ಧಿಸುವ ಕುರಿತು ತಾನು ಇನ್ನಷ್ಟೆ ಯೋಚಿಸಬೇಕಿದೆ ಎಂದು ಹೇಳಿರುವ ಹಳೆಯ ದೃಶ್ಯಾವಳಿಗಳನ್ನೆ ಟಿವಿ ವಾಹಿನಿಗಳು ತೋರಿಸುತ್ತಿವೆ" ಎಂದು ನಟ ತನಗೆ ತಿಳಿಸಿದ್ದಾಗಿ ಹೇಳಿದ್ದಾರೆ.ಇಲ್ಲ ಅದು ಇತ್ತೀಚಿನ ದೃಶ್ಯಗಳು ಎಂದು ಹೇಳಿದಾಗ, ಸಂಜಯ್ ತನ್ನೊಂದಿಗೆ ಶನಿವಾರ ಲಕ್ನೋದಲ್ಲಿ ಇರಲಿದ್ದಾರೆ. ನೀವು ಅವರನ್ನು ವಿಚಾರಿಸಬಹುದು ಎಂದು ಹೇಳಿದ ಸಿಂಗ್, ಸಂಜಯ್ ಜತೆ ಸಮಾಲೋಚನೆ ನಡೆಸದೆ ಅವರ ಅಭ್ಯರ್ಥಿತನವನ್ನು ಘೋಷಿಸುವುದಿಲ್ಲ ಎಂದು ಹೇಳಿದ್ದಾರೆ. " ಅವರೊಂದಿಗೆ ಸಮಾಲೋಚನೆ ನಡೆಸದೆ ಅವರ ಅಭ್ಯರ್ಥಿತನವನ್ನು ಘೋಷಿಸಲು ತಾನೊಬ್ಬ ಮೂರ್ಖನಲ್ಲ. ಆದರೆ ಅವರಿಗೆ ಸ್ಫರ್ಧಿಸುವುದು ಇಚ್ಚೆ ಇಲ್ಲವೆಂದಾದರೆ ಅವರನ್ನು ಒತ್ತಾಯಿಸುವುದಿಲ್ಲ" ಎಂದು ಸಮಾಜವಾದಿ ಮುಖಂಡ ಹೇಳಿದ್ದಾರೆ.ಇದಕ್ಕೆ ಮುಂಚಿತವಾಗಿ ಸಂಜಯ್ ರಾಜಕೀಯಕ್ಕೆ ಸೇರುವ ಕುರಿತು ತಾನಿನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದರು.ಸಂಜಯ್ ಹಾಗೂ ಅವರ ಸಹೋದರಿ ಪ್ರಿಯಾದತ್ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದೆ ಎಂದು ಸುದ್ದಿಯಾದ ಬಳಿಕ ಸಂಜಯ್ ಹೇಳಿಕೆ ಹೊರಬಿದ್ದಿದೆ. |