ಮುಖ್ಯಮಂತ್ರಿ ಮಾಯಾವತಿ ಅವರ ಹುಟ್ಟುಹಬ್ಬವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ನಾಲ್ಕು ಸಾವಿರಕ್ಕೂ ಅಧಿಕ ವಿರೋಧಿ ನಾಯಕರನ್ನು ಬಂಧಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಸಮಾಜವಾದಿ ಪಕ್ಷದ ನಾಯಕರಾಗಿದ್ದಾರೆ.
"ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಒಟ್ಟು 4,009 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 3,732 ಮಂದಿ ಸಮಾಜವಾದಿ, 200 ಮಂದಿ ಕಾಂಗ್ರೆಸ್ ಹಾಗೂ 70 ಬಿಜೆಪಿ ಕಾರ್ಯಕರ್ತರು ಸೇರಿದ್ದಾರೆ ಎಂದು ಗೃಹ ಇಲಾಖಾ ಮೂಲಗಳು ಹೇಳಿವೆ.
ಬಂಧಿತರಲ್ಲಿ ಶಿವಪಾಲ್ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್, ಸಂಸದ ರಾಮ್ಜಿಲಾಲ್ ಸುಮನ್ ಪ್ರಶಾಂತ್ ಯಾದವ್, ಶಾಸಕರಾದ ಶೈಲೇಂದ್ರ ಯಾದವ್ ಮತ್ತು ರಾಮಾಶ್ರಯ್ ವಿಶ್ವಕರ್ಮ, ಸಂಸದ ಪ್ರಕಾಶ್ ವರ್ಮಾ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗೋರಖ್‍ಪುರದಲ್ಲಿ ಅಮರ್ ಸಿಂಗ್, ಮನೋಜ್ ತಿವಾರಿ, ಜಯಾ ಬಚ್ಚನ್ ಅವರುಗಳು ಬಂಧನಕ್ಕೀಡಾಗಿದ್ದಾರೆ. |