ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಈತನೀಗ ಭಾರತಕ್ಕೆ ಅತ್ಯಮ‌ೂಲ್ಯ ಪಾಕಿಸ್ತಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈತನೀಗ ಭಾರತಕ್ಕೆ ಅತ್ಯಮ‌ೂಲ್ಯ ಪಾಕಿಸ್ತಾನಿ
ND
ಇದೀಗ ಓರ್ವ ಪಾಕಿಸ್ತಾನಿ ಭಾರತದಲ್ಲಿ ಅತಿಹೆಚ್ಚು ರಕ್ಷಿತ ವ್ಯಕ್ತಿ. 24 ಗಂಟೆಯೂ ಆತನಿಗೆ ಕಾವಲುಗಾರರು. ಆತ ಸೇವಿಸುವ ಮುನ್ನ ಆಹಾರಕ್ಕೆ ವಿಷ ಪ್ರಯೋಗವೇನಾದರೂ ಆಗಿದೆಯಾ ಎಂಬ ಪರೀಕ್ಷೆ ನಡೆಯುತ್ತದೆ. ಆಯ್ದ ಪೊಲೀಸರಿಗೆ ಮಾತ್ರವೇ ಆತನ ಕೊಠಡಿಗೆ ಪ್ರವೇಶ. ಈತನೀಗ ಭಾರತದ 'ಅತ್ಯಮ‌ೂಲ್ಯ' ವ್ಯಕ್ತಿ.

ಈತ ಇನ್ಯಾರೂ ಅಲ್ಲ, ಮುಂಬೈ ದಾಳಿಯ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್. ದಾಳಿಯ ವೇಳೆ ಪೊಲೀಸರಿಗೆ ಸೆರೆಸಿಕ್ಕಿರುವ ಏಕೈಕ ಉಗ್ರ. ಈತನನ್ನು ಅತ್ಯುನ್ನತ ಪೊಲೀಸ್ ಭದ್ರತೆಯ ಬಂಧನದಲ್ಲಿಡಲಾಗಿದ್ದು, ಕೇವಲ ನಾಲ್ವರು ಪೊಲೀಸರಿಗೆ ಮಾತ್ರ ಅಲ್ಲಿ ಪ್ರವೇಶ.

ಕಸಬ್‌ನನ್ನು ತನಿಖೆ ನಡೆಸುತ್ತಿರುವ ಪೊಲೀಸರು ಯಾವುದೇ ಗ್ರೇಡ್‌ನವರಾಗಿದ್ದರೂ, ತಮ್ಮ ಮೊಬೈಲನ್ನು ಹೊರಗಿಟ್ಟು ಹೋಗಬೇಕು. ಭಾರತೀಯ ತನಿಖಾ ಸಂಸ್ಥೆಗಳು, ಅಮೆರಿಕಾದ ಎಫ್‌ಬಿಐ ಮತ್ತು ಯುಕೆಯ ಸ್ಕಾಟ್‌ಲ್ಯಾಂಡ್ ಯಾರ್ಡ್ ಯಾರೇ ಆಗಿದ್ದರೂ ಅವರಿಗೆ ಈ ನಿಯಮ ಅನ್ವಯವಾಗುತ್ತದೆ.

ಆತನಿಗೆ ನೀಡುವ ಆಹಾರದ ಮೇಲಂತೂ ಭಯಂಕರ ನಿಗಾ ವಹಿಸಲಾಗುತ್ತದೆ. ಪ್ರತಿದಿನ ಈತನಿಗೆ ಆಹಾರ ಸರಬರಾಜು ಮಾಡಲು ಅನಿಶ್ಚಿತವೆಂಬಂತೆ ಪೊಲೀಸ್ ಅಧಿಕಾರಿಗಳ ತಂಡವನ್ನು ಆರಿಸಲಾಗುವುದು. ಯಾವಾಗ ಯಾರಿಗೆ ಈ ಜವಾಬ್ದಾರಿ ಲಭಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆತನ ಪ್ರತಿ ಊಟವೂ ವಿವಿಧ ಪ್ರದೇಶದಿಂದ ತರಲಾಗುತ್ತದೆ.

ಜನವರಿ 19ರ ತನಕ ಪೊಲೀಸ್ ಬಂಧನದಲ್ಲಿರುವ ಕಸಬ್‌ನ ಕೈಗೆ 24 ಗಂಟೆಗಳ ಕಾಲವೂ ಕೋಳತೊಡಿಸಲಾಗುತ್ತದೆ. ಆತನ ಚಲನವಲನವನ್ನು ಸೆಲ್‌ನಲ್ಲಿ ಅಳವಡಿಸಲಾಗಿರುವ ಭದ್ರತಾ ಕ್ಯಾಮರಾಗಳ ಮೂಲಕ ಸತತ ವೀಕ್ಷಣೆ ಮಾಡಲಾಗುತ್ತಿದೆ. ಇದೀಗ ಲಾಕ್-ಅಪ್‌ನಲ್ಲಿರುವ ವೇಳೆ ಕಟ್ಟುನಿಟ್ಟಿನ ಹಾಗೂ ವಿಸ್ತೃತ ಭದ್ರತೆ ಸೂಕ್ತವಾಗಿ ನಡೆಯುತ್ತಿದೆ. ಆದರೆ ಈತನನ್ನು ಜೈಲಿಗೆ ಕಳುಹಿಸಲೇ ಬೇಕು.

ಪೊಲೀಸ್ ವಶದಲ್ಲಿರುವ ವೇಳೆಗೆ ವಿಚಾರಣೆ ನಡೆಸಲಾಗದು. ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕವೇ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ ಎಂದು ವಕೀಲರೊಬ್ಬರು ಹೇಳುತ್ತಾರೆ.

ನ್ಯಾಯಾಂಗ ಬಂಧನದ ವೇಳೆಗೆ ಕಸಬ್‌ನನ್ನು ನಂತರದಲ್ಲಿ ಅರ್ಥರ್ ರಸ್ತೆ ಜೈಲಿಗೆ ವರ್ಗಾಯಿಸಲಾಗುವುದು. ಆದರೆ ಇಲ್ಲೂ ಯಾವುದೇ ಅನಾಹುತವಾಗದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಕಸಬ್ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನು ಜೈಲಿನೊಳಗೆ ಸ್ಥಾಪಿಸಲಾಗುವುದು.

ಈ ನ್ಯಾಯಾಲಯಕ್ಕೆ ಎಲ್ಲರಿಗೂ ಮುಕ್ತ ಪ್ರವೇಶದ ಅವಕಾಶ ಇರುವುದಿಲ್ಲ. 1993ರ ಮುಂಬೈ ಸರಣಿ ಸ್ಫೋಟ ಆರೋಪಿಗಳ ನಿರಂತರ ವಿಚಾರಣೆ ಇಂತಹುದೇ ನ್ಯಾಯಾಲಯದಲ್ಲಿ ನಡೆದಿತ್ತು.

ದಾವೂದ್ ಹಾಗೂ ಚೋಟಾ ರಾಜನ್‌ ಗ್ಯಾಂಗಿನ ಹಲವರು ಈ ಜೈಲಿನಲ್ಲಿದ್ದಾರೆ. ಆದರೆ ಕಸಬ್‌ಗೆ ಹಿಂದೆಂದೂ ಇಲ್ಲದಂತಹ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಕಳೆದ ತಿಂಗಳ ಪರಿಚಯ ಪೆರೇಡ್ ನಡೆಸಿದ್ದ ವೇಳೆ ಇದೇ ಜೈಲಿನಲ್ಲಿ ಈತ ಈಗಾಗಲೇ ಎರಡು ರಾತ್ರಿಗಳನ್ನು ಕಳೆದಿದ್ದಾನೆ.

ಕಸಬ್‌ನನ್ನು ಅಂಡಾಕಾರದ ಸೆಲ್‌ನಲ್ಲಿ ಇಡಲಾಗುವುದು. ಇಂತಹ ಸೆಲ್‌ಗಳಲ್ಲಿರುವವರಿಗೆ ಪಕ್ಕದ ಸೆಲ್‌ಗಳಲ್ಲಿ ಯಾರು ಇದ್ದಾರೆ ಎಂಬುದು ಕಾಣುವುದಿಲ್ಲ ಮತ್ತು ತಿಳಿಯುವುದಿಲ್ಲ. 1993 ಮುಂಬೈದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ಸಂಜಯ್ ದತ್‌ನನ್ನೂ ಇಂತಹುದೇ ಸೆಲ್‌ನಲ್ಲಿ ಇಡಲಾಗಿತ್ತು. ಅರ್ಥರ್ ರಸ್ತೆ ಜೈಲಿನಲ್ಲಿ ಇಂತಹ 16 ಸೆಲ್‍‌ಗಳಿವೆ.

ಮುಂಬೈ ದಾಳಿಯ ತನಿಖೆಯ ಕಾರ್ಯದಂತೆ ಬಂಧನದಲ್ಲಿರುವ ಕಸಬ್‌ನ ರಕ್ಷಣೆಯೂ ಅತಿದೊಡ್ಡ ಕಾರ್ಯವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ: ಪ್ರಧಾನಿ ಭರವಸೆ
ಚಂಡೀಗಢ: ಅತ್ಯಾಚಾರ ಪ್ರಕರಣ
ಆರುಪಿ ಕೊಲೆ ಪ್ರಕರಣ: ಸಿಬಿಐ ಮಂದಗತಿ
ಗಳಿಗೆಗೊಂದು ಮಾತು: ಈಗ ಪ್ರಣಬ್ ಸರದಿ
ಸತ್ಯಂ ರಾಜು: ಸೆಬಿ ವಿಚಾರಣೆಗೆ ಕೋರ್ಟ್ ನಕಾರ
ಸೊಮಾಲಿಯಾ ಕಡಲ್ಗಳ್ಳರಿಂದ 3 ಭಾರತೀಯರ ಒತ್ತೆ