ತನ್ನ ಸಹೋದರ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಫರ್ಧಿಸುವ ವಿಚಾರದಿಂದ ತಾನು ಭ್ರಮನಿರಸನಗೊಂಡಿದ್ದೇನೆ ಎಂಬುದಾಗಿ ಪ್ರಿಯಾದತ್ ಹೇಳಿರುವ ಬೆರಳೆಣಿಕೆ ದಿನಗಳಲ್ಲೇ, ಬಾಲಿವುಡ್ ತಾರೆ ಸಂಜಯ್ ದತ್, ರಾಜಕೀಯ ರಂಗಕ್ಕೆ ತನ್ನ ಪ್ರವೇಶವನ್ನು ಘೋಷಿಸಿದ್ದಾರೆ." ಹೌದು ತಾನು ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ. ನಾನು ಸಮಾಜವಾದಿ ಪಕ್ಷದಿಂದಲೇ ಚುನಾವಣೆಗೆ ಸ್ಫರ್ಧಿಸುತ್ತೇನೆ" ಎಂಬುದಾಗಿ ಸಂಜಯ್ ದತ್ ಘೋಷಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.ಇದೇ ವೇಳೆ ತಮ್ಮ ಕುಟುಂಬದಲ್ಲಿ ಯಾವುದೇ ಒಡಕಿಲ್ಲ ಎಂದು ಸ್ಪಷ್ಟಪಡಿಸಿದ ಸಂಜಯ್ ದತ್, ಚುನಾವಣಾ ಸ್ಫರ್ಧಿಸುವ ದೃಢನಿಲುವನ್ನು ವ್ಯಕ್ತಪಡಿಸಿದರು." ನನಗೆ ಯಾರ ಅನುಮತಿಯ ಅವಶ್ಯಕತೆ ಇಲ್ಲ. ನಾನು ಕುಟುಂಬದಲ್ಲಿ ಹಿರಿಯ. ಪ್ರಿಯಾ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದಾಳೆ. ಆದರೂ, ಆಕೆ ಸಿಟ್ಟಿನಿಂದ ಏನಾದರೂ ಹೇಳಿದಿದ್ದರೂ, ನಾನಾಕೆಯನ್ನು ಕ್ಷಮಿಸುತ್ತೇನೆ" ಎಂದು ಸಂಜಯ್ ನುಡಿದರು.ಸಂಜಯ್ ಹಾಗೂ ಮಾನ್ಯತಾ ವಿವಾಹದ ಬಳಿಕ, ಸಹೋದರಿ ಪ್ರಿಯಾ ಹಾಗೂ ಇವರ ನಡುವಿನ ಅಸಮಾಧಾನ ಹುಟ್ಟಿಕೊಂಡಿತ್ತು ಎಂದು ಹೇಳಲಾಗಿದೆ. ಆದರೆ, ಪ್ರಿಯಾ ತಾನು ಮಾನ್ಯತಾ ಕುರಿತು ಮಾನಾಡುವುದಿಲ್ಲ ಎಂದು ಹೇಳಿದ್ದಾರೆ. "ಅದು ಶ್ರೀಮಾನ್ ಮತ್ತು ಶ್ರೀಮತಿ ದತ್ ಎಂದರೆ ಅದು ತಾನು ಮತ್ತು ಮಾನ್ಯತಾ" ಎಂದು ಹೇಳುವ ಮೂಲಕ ಪತ್ನಿ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ.ಇದೀಗ ತಾನು ಸ್ಫರ್ಧಿಸುವ ವಿಚಾರವನ್ನು ಸಂಜಯ್ ಖುದ್ದಾಗಿ ಬಹಿರಂಗ ಪಡಿಸುವ ಕುರಿತು ಅನುಮಾನಗಳು ಬಗೆಹರಿದಿವೆ. ಆದರೆ 1993ರ ಮುಂಬೈ ದಾಳಿ ಪ್ರಕರಣದಲ್ಲಿ ಶಿಕ್ಷೆಗೀಡಾಗಿ ಜಾಮೀನಿನಲ್ಲಿ ಹೊರಗಿರುವ ಇವರ ಭಾಗವಹಿಸುವಿಕೆಗೆ ಕಾನೂನು ಅನುಮತಿ ನೀಡುತ್ತದೆಯಾ ಎಂಬುದೀಗ ಪ್ರಶ್ನೆ. |