ಮುಂಬೈ ದಾಳಿಯ ವೇಳೆಗೆ ಉಗ್ರರೊಂದಿಗೆ ಕಾದಾಡುವ ವೇಳೆ ಪೊಲೀಸರ ಕೈ ಕೆಳಗಾಗಿರುವುದಕ್ಕೆ ಕಳಪೆ ಶಸ್ತ್ರಾಸ್ತ್ರಗಳಲ್ಲ, ಬದಲಿಗೆ ಕಳಪೆ ಮಟ್ಟದ ತರಬೇತಿ ಕಾರಣ ಎಂದು ಜಿಯೋಪೊಲಿಟಿಕಲ್ ಇಂಟಲಿಜೆನ್ಸ್‌ನ ಚಿಂತಕರ ಚಿಲುಮೆ ಸ್ಟ್ರಾಟ್‌ಫಾರ್ ಹೇಳಿದೆ.
ಮುಂಬೈದಾಳಿಕೋರರು ಶಸ್ತ್ರಾಸ್ತ್ರಗಳಿಗಿಂತಲು ತೀಕ್ಷ್ಣ ಗುರಿಯ ವಿಚಾರದಲ್ಲಿ ಮುಂಬೈ ಪೊಲೀಸರನ್ನು ಹಿಂದಿಕ್ಕಿದರು ಎಂಬುದಾಗಿ ಸ್ಟ್ರಾಟ್‌ಫಾರ್‌ನ ಜನವರಿ 14ರ ವರದಿ ಹೇಳಿದೆ.
"ಪೊಲೀಸರಿಗೆ ಒದಗಿಸಿರುವ ಶಸ್ತ್ರಾಸ್ತ್ರವಲ್ಲ, ಬದಲಿಗೆ ಅವರಿಗೆ ನೀಡಲಾಗಿರುವ ತರಬೇತಿಯ ಕುರಿತು ಬೆಟ್ಟು ಮಾಡಬೇಕಿದೆ. ಒಬ್ಬ ಪೊಲೀಸ್ ಅಧಿಕಾರಿಗೆ 20 ಅಥವಾ 30 ಮೀಟರ್ ಅಂತರದಿಂದ ರೈಫಲ್‌ನಲ್ಲಿ ಒಬ್ಬ ಶಂಕಿತನ ಮೇಲೆ ಗುರಿಇರಿಸಲಾಗುವುದಿಲ್ಲ ಎಂದಾದರೆ, ರೈಫಲ್ ಅಥವಾ ಮೆಶಿನ್ ಗನ್ ಒದಗಿಸಿದರೂ ಆತ ನಿಯಂತ್ರಿಸಲಾರ" ಎಂಬುದಾಗಿ ಅದು ತನ್ನ ವರದಿಯಲ್ಲಿ ತಿಳಿಸಿದೆ.
ಮುಂಬೈ ದಾಳಿಕೋರರ ವಿರುದ್ಧ ಪೊಲೀಸರು ಗುಂಡು ಹಾರಿಸಿದರೂ, ಅದು ಗುರಿತಪ್ಪಿತ್ತು ಎಂಬ ಮಾಧ್ಯಮ ವರದಿಗಳನ್ನು ಪ್ರಸ್ತಾಪಿರುವ ಸ್ಟ್ರಾಟ್‌ಫಾರ್, "ಮುಂಬೈ ಪೊಲೀಸರು ಬಳಸಿರುವ ಲೀ-ಎನ್‌ಫೀಲ್ಡ್ ರಿವಾಲ್ವರ್ ನಿಖರ ಮತ್ತು ನಂಬಲರ್ಹ ಕದನ ರೈಫಲ್. ಇದು ಶಕ್ತಿಶಾಲಿ ಗುಂಡು ಹಾರಿಸುತ್ತದೆ. .303 ಬ್ರಿಟಿಷ್ ಒಬ್ಬವ್ಯಕ್ತಿಯನ್ನು ಮಲಗಿಸಲು ಶಕ್ತಿಶಾಲಿಯಾಗಿದೆ. ಸೋವಿಯತ್ ವಿರುದ್ಧ ಅಫ್ಘಾನ್ ಶಾರ್ಪ್‌ಶೂಟರ್‌ಗಳು ಇದೇ ಶಸ್ತ್ರ ಬಳಸಿ ಯಶಸ್ಸು ಸಾಧಿಸಿದ್ದಾರೆ. ಅಲ್ಲದೆ, ತಾಲಿಬಾನಿಗಳು ಅಫ್ಘಾನಿನಲ್ಲಿ ನಿಯೋಜಿತವಾಗಿರುವ ಸಂಯುಕ್ತ ಪಡೆಗಳ ವಿರುದ್ಧ ಇಂದಿಗೂ ಇದೇ ಲೀ ಎನ್‌ಫೀಲ್ಡ್ ಬಳಸುತ್ತಿದೆ ಎಂದು ಹೇಳಿದೆ.
ಭಾರತೀಯ ಪೊಲೀಸರಿಗೆ ಈ ಕುರಿತು ಯಾವುದೇ ವಿಶೇಷ ತರಬೇತಿ ನೀಡುತ್ತಿಲ್ಲ ಎಂದು ಪೊಲೀಸರೂ ದೂರುತ್ತಿದ್ದಾರೆ. ಕೆಲವು ಸಾಮಾನ್ಯ ಪೊಲೀಸರಿಗೆ ಕೇವಲ ಒಂದು ವರ್ಷದ ತರಬೇತಿ ನೀಡಲಾಗುತ್ತಿದೆ. ಮುಂಬೈ ದಾಳಿಯಂತಹ ಕಾರ್ಯಚರಣೆಗೆ ಇದು ಸಾಲದು, ವಿಶೇಷ ತರಬೇತಿಯ ಅವಶ್ಯಕತೆ ಇದೆ ಎಂಬುದು ಅವರ ಅಭಿಪ್ರಾಯ. |