ಮುಂಬೈ ದಾಳಿ ವಿಚಾರದ ಕುರಿತು ತಾನು ಆರಂಭಿಸಿರುವ ಕ್ರಮಗಳ ಕುರಿತು ಔಪಚಾರಿಕವಾಗಿ ಸಂವಹಿಸಿರುವ ಕಾರಣ ಪಾಕಿಸ್ತಾನ ತನ್ನ ತನಿಖೆಯನ್ನು ಪೂರೈಸಲು ಎಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಕಾದು ನೋಡುವ ನೀತಿಯನ್ನು ಅನುಸರಿಸುತ್ತಿರವುದಾಗಿ ಭಾರತ ಶನಿವಾರ ಹೇಳಿದೆ." ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅವರಿಗೆ ಪಾಕಿಸ್ತಾನವು ಸಲ್ಲಿಸಿರುವ ಉತ್ತರದಲ್ಲಿ ತನಿಖಾ ಪ್ರಕ್ರಿಯೆ ಆರಂಭಿಸಿರುವುದಾಗಿ ಹೇಳಲಾಗಿದೆ. ಅವರು ಎಷ್ಟುಕಾಲ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡೋಣ" ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಅವರು ಭಾರತ್ ಚೇಂಬರ್ ಆಫ್ ಕಾಮರ್ಸಿನ ವಾರ್ಷಿಕ ಮಹಾ ಸಭೆಯ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಜನವರಿ 15ರಂದು ತಾನು ತನ್ನ ಅಧಿಕೃತ ತನಿಖೆ ಆರಂಭಿಸಿರುವುದಾಗಿ ಇಸ್ಲಾಮಾಬಾದ್ ದೆಹಲಿಗೆ ಅಧಿಕೃತವಾಗಿ ತಿಳಿಸಿದೆ.ಪಾಕಿಸ್ತಾನವು ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಇದಕ್ಕೆ ಸಮಯ ಹಿಡಿಯುತ್ತದೆ. ರಾಜತಾಂತ್ರಿಕ ಕಾರ್ಯಕ್ಷಮತೆಯನ್ನು ಸ್ವಿಚ್ ಆನ್, ಸ್ವಿಚ್ ಆಫ್ ಮಾಡಿದಂತೆ ಮಾಡಲಾಗುವುದಿಲ್ಲ" ಎಂದು ನುಡಿದರು.ಮುಂಬೈ 26ರಂದು ದಾಳಿ ಮಾಡಿದಂದಿನಿಂದ ನಾವು ಸಂಗ್ರಹಿಸಿರುವ ಪುರಾವೆಗಳನ್ನು ನೀಡಿದ್ದೇವೆ. ನಾವು ದಾಖಲೆ ಪತ್ರಗಳನ್ನು ಪಾಕಿಸ್ತಾನದ ಪ್ರಾಧಿಕಾರಕ್ಕೆ ನೀಡಿದ್ದೇವೆ ಎಂದು ನುಡಿದರು." ಭಯೋತ್ಪಾದನೆಯ ಸಂಪೂರ್ಣ ಫಿತೂರಿಯನ್ನು ಬಯಲಿಗೆಳೆಯುವಂತಹ ವಿಶ್ವಾಸಾರ್ಹ, ಪಾರದರ್ಶಕ ಮತ್ತು ದೃಡಪಡಿಸುವಂತಹ ಸಂಪೂರ್ಣ ತನಿಖೆಯನ್ನು ಮುಂಬೈ ದಾಳಿ ಕುರಿತು ನಡೆಸಿ" ಎಂಬುದಾಗಿ ಪ್ರಣಬ್ ಶುಕ್ರವಾರ ಪಾಕಿಸ್ತಾನವನ್ನು ಒತ್ತಾಯಿಸಿದ್ದರು.ಭಾರತದ ಮೇಲೆ ದಾಳಿ ಮಾಡಿದವರನ್ನು ತಮಗೊಪ್ಪಿಸಬೇಕು ಎಂಬ ತಮ್ಮ ಒತ್ತಾಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ನುಡಿದರು.ಪಾಕಿಸ್ತಾನವು ಅಂತಾರಾಷ್ಟ್ರೀಯ ಬಾಧ್ಯತೆಗನುಗುಣವಾಗಿ ಪಾಕಿಸ್ತಾನವು ಆರಂಭಿಸಿರುವ ಸರಣಿ ಕ್ರಮಗಳ ಕುರಿತು ಭಾರತೀಯ ಹೈ ಕಮಿಷನರ್‌ಗೆ ಸಂದೇಶ ರವಾನಿಸಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿತ್ತು. |