ಅಹಿಂಸೆಯಿಂದ ಉಗ್ರವಾದವನ್ನು ತಡೆಯಲು ಸಾಧ್ಯವಿಲ್ಲ ಎಂದು ಟಿಬೆಟ್‌ನ ಧರ್ಮಗುರು ದಲಾಯ್ ಲಾಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಜೀವನದ ಉದ್ದಕ್ಕೂ ಅಹಿಂಸೆಯ ದಾರಿಯನ್ನೇ ಆಯ್ಕೆ ಮಾಡಿಕೊಂಡಿರುವ ಲಾಮಾ ಅವರ ಹೇಳಿಕೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಹಿಂಸಾಚಾರ ಮಾರ್ಗ ಹಿಡಿದಿರುವ ಉಗ್ರವಾದಿಗಳಿಗೆ ಅಹಿಂಸಾ ಮಾರ್ಗ ಅರ್ಥವಾಗುವುದಿಲ್ಲ, ಅರ್ಥಮಾಡಿಕೊಳ್ಳಲು ಅವರ ಮನಸ್ಸು, ಹೃದಯ ತೆರೆದುಕೊಂಡೂ ಇಲ್ಲ ಎಂದು ಹೇಳಿದ ಅವರು, ಅವರೆಲ್ಲ ಬುದ್ದಿವಂತರು ಹಾಗೂ ತುಂಬಾ ವಿದ್ಯಾವಂತರು ಆಗಿರುತ್ತಾರೆ ಎಂದರು.
ಅವರು ಇಲ್ಲಿನ ಮಾಧವರಾವ್ ಸಿಂಧಿಯಾ ಸ್ಮಾರಕ ಭಾಷಣ ಮಾಡುತ್ತಿದ್ದ ದಲಾಯ್ ಲಾಮ ಉಗ್ರವಾದವನ್ನು ತಡೆಯುವ ಮೂಲಕವೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ. |