ಸಿಎಸ್‌ಟಿಯಲ್ಲಿ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈ ದಾಳಿ ವೇಳೆ ಬಂಧನಕ್ಕಿಡಾಗಿರುವ ಅಜ್ಮಲ್ ಅಮೀರ್ ಕಸಬ್‌ನನ್ನು ಫೆ.2ರ ತನಕ ಪೊಲೀಸರ ವಶಕ್ಕೆ ನೀಡಲಾಗಿದೆ.
ನವೆಂಬರ್ 26ರಂದು ರಾತ್ರಿ ಬಂಧನಕ್ಕೀಡಾದ ಬಳಿಕ ಪೊಲೀಸರ ವಶದಲ್ಲಿರುವ ಕಸಬ್ ವಿರುದ್ಧ 12 ಪ್ರಕರಣಗಳನ್ನು ದಾಖಸಲಾಗಿದೆ.
ಕಾಮಾ ಹಾಗೂ ಅಲ್‌ಬ್ಲೆಸ್ ಆಸ್ಪತ್ರೆಯಲ್ಲಿ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಜನವರಿ 4ರಂದು ಪೊಲೀಸರ ವಶಕ್ಕೆ ನೀಡಲಾಗಿತ್ತು.
ಭದ್ರತಾ ಕಾರಣಗಳಿಗಾಗಿ ಕಸಬ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿಲ್ಲ. ಬದಲಿಗೆ, ದಂಡಾಧಿಕಾರಿ ಎನ್.ಶ್ರೀಮಂಗಳೇ ಹಾಗೂ ಹೆಚ್ಚುವರಿ ಸರಕಾರಿ ಅಭಿಯೋಜಕ ಈ.ಬಿ. ಧಮಲ್ ಅವರನ್ನು ಕಸಬ್‌ನನ್ನು ಇರಿಸಲಾಗಿರುವ ಅಪರಿಚಿತ ಜಾಗಕ್ಕೆ ಕರೆದೊಯ್ಯಲಾಯಿತು.
ಪೊಲೀಸರು ಇನ್ನಷ್ಟು ವಿಚಾರಣೆ ನಡೆಸಬೇಕಿರುವ ಕಾರಣ ಆತನನ್ನು ಪೊಲೀಸರು ವಶಕ್ಕೆ ನೀಡಬೇಕು ಎಂದು ವಾದಿಸಲಾಯಿತು ಎಂಬುದಾಗಿ ಧಮಲ್ ನುಡಿದರು.
ಪೊಲೀಸರ ವಿರುದ್ಧ ಏನಾದರೂ ದೂರುಗಳಿವೆಯೇ ಎಂದು ಮ್ಯಾಜಿಸ್ಟ್ರೇಟ್ ಅವರು ಕೇಳಿದಾಗ ಯಾವುದೇ ದೂರುಗಳಿಲ್ಲ ಎಂದು ಕಸಬ್ ನುಡಿದ.
ಕಸಬ್ ತನ್ನ ಸಹಚರ ಇಸ್ಮಾಯಿಲ್ ಖಾನ್‌ನೊಂದಿಗೆ ನವೆಂಬರ್ 26ರಂದು ಛತ್ರಪತಿ ಶಿವಾಜಿ ಟರ್ಮಿನಸ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ 58 ಮಂದಿ ಸಾವಿಗೀಡಾಗಿದ್ದು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. |