ಯಾವುದೇ ಅತ್ತಿಗೆ ಮತ್ತು ನಾದಿನಿಯರಿಗೆ ಆಗಿ ಬರುವುದಿಲ್ಲ ಎಂದು ರಾಜಕೀಯ ಪ್ರವೇಶ ಮಾಡಿರುವ ಬಾಲಿವುಡ್ ತಾರೆ ಸಂಜಯ್ ದತ್ ಹೇಳಿದ್ದಾರೆ.ದತ್ ಅವರು ಟೈಮ್ಸ್ ಆಪ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ, ನಿಮ್ಮ ಸಹೋದರಿ ಇನ್ನೂ ನಿಮ್ಮ ಪತ್ನಿ ಮಾನ್ಯತಾರನ್ನು ಸ್ವೀಕರಿಸಿಲ್ಲವೇ ಎಂಬುದಾಗಿ ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಾ ಮೇಲಿನಂತೆ ಹೇಳಿದ್ದಾರೆ." ಮಾನ್ಯತಾ ತನ್ನ ಸಹೋದರನ ಪತ್ನಿ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ನಿರಾಕರಿಸಿರುವ ಪ್ರಿಯಾಳನ್ನು ತಾನು ಮತ್ತು ಮಾನ್ಯತಾ ಕ್ಷಮಿಸುತ್ತೇವೆ. ಮಾನ್ಯತಾ ಸುನಿಲ್ ದತ್ ಹಾಗೂ ನರ್ಗೀಸ್ ದಂಪತಿಗಳ ಸೊಸೆ. ಪಾಲಿ ಹಿಲ್‌ನಲ್ಲಿರು ಏಕೈಕ ದತ್ ಜೋಡಿ ಎಂದರೆ ತಾನು ಮತ್ತು ಮಾನ್ಯತಾ. ಮದುವೆಯ ಬಳಿಕ ಹುಡುಗಿಯರು ತನ್ನ ಪತಿಯ ಕುಟುಂಬದ ಅಡ್ಡ ಹೆಸರನ್ನು ಬಳಸಿಕೊಳ್ಳಬೇಕು. ಇದರೊಂದಿಗೆ ಎಲ್ಲಾ ಜವಾಬ್ದಾರಿಗಳು ಬಂದಂತಾಗುತ್ತದೆ. ಇದು ತನ್ನ ಸಹೋದರಿಯರಿಗೆ ಮಾತ್ರವಲ್ಲ, ಹೆತ್ತವರ ಅಡ್ಡ ಹೆಸರನ್ನು ಬಳಸಿಕೊಳ್ಳುತ್ತಿರುವ ಎಲ್ಲಾ ಹುಡುಗಿಯರಿಗೂ ತನ್ನ ಸಂದೇಶ" ಎಂಬುದಾಗಿ ದತ್ ಹೇಳಿದ್ದಾರೆ.ನಿಮ್ಮ ಸಹೋದರಿಯರು ಮತ್ತು ಪತ್ನಿಯನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತೀರಿ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದತ್, "ಸಮತೋಲನದ ಪ್ರಶ್ನೆಯೇ ಇಲ್ಲ. ನನ್ನ ಪತ್ನಿಗೆ ನನ್ನ ಜೀವನದಲ್ಲಿ ಪ್ರಥಮ ಆದ್ಯತೆ. ಯಾವುದೇ ದಂಪತಿಗಳೂ ಹೀಗೆ ಭಾವಿಸುತ್ತಾರೆ. ಪ್ರಿಯಾಳಿಗೆ ಆಕೆಯ ಪತ್ನಿ ಒವೆನ್ ಪ್ರಥಮ ಆದ್ಯತೆ" ಎಂದು ಉತ್ತರಿಸಿದರು." ನನ್ನ ತಾಯಿ ಇಂದಿರುತ್ತಿದ್ದರೆ ಅವರು ಸಂತೋಷದಿಂದ ಮಾನ್ಯತಾಳನ್ನು ಸ್ವೀಕರಿಸುತ್ತಿದ್ದರು. ಮಾನ್ಯತಾ ನನ್ನ ತಾಯಿಯಂತೆ ಒಬ್ಬ ಗೃಹಿಣಿ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ದತ್ ಜೂನಿಯರ್ ದತ್ ಹೇಳಿದರು.ಆದರೆ ನಮ್ಮ ಕುಟುಂಬದಲ್ಲಿ ಒಡಕಿಲ್ಲ. ಕುಟುಂಬದೊಳಗೆ ಒಡಕು ಎಂಬುದಾಗಿ ಪತ್ರಿಕೆಯಲ್ಲಿ ಓದಿ ನಿಜವಾಗಿಯೂ ನೋವಾಯಿತು. ಇತರ ಯಾವುದೇ ಕುಟುಂಬದಲ್ಲಿ ಇರುವಂತೆ ನಮ್ಮೊಳಗೂ ಅಭಿಪ್ರಾಯ ಬೇಧವಿದೆ. ನನ್ನ ಭಾವನೆಗಳನ್ನು ಪ್ರೀತಿಸುವ ಮತ್ತು ಗೌರವಿಸುವ ಮಾನ್ಯತಾ, ನನ್ನ ಕುಟುಂಬದ ಕುರಿತು ಮಾಧ್ಯಮದೊಂದಿಗೆ ಮಾತನಾಡುವುದಿಲ್ಲ. ಎಲ್ಲವೂ ಸದ್ಯವೇ ಸರಿಹೋಗಲಿದೆ" ಎಂಬುದು ಸಂಜೂ ಬಾಬಾ ಅನಿಸಿಕೆ.ಲಕ್ನೋದ ಮಂದಿ ಎಕೆ-47 ಚಿತ್ರದ ಭಿತ್ತಿಚಿತ್ರದೊಂದಿಗೆ ನಿಮಗೆ ಸ್ವಾಗತ ಕೋರಿದ್ದಾರಲ್ಲಾ ಎಂಬ ಪ್ರಶ್ನೆಗೆ, "ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಚಾರ ಬಯಸುತ್ತಿವೆ. ಅವರು ನನ್ನನ್ನು ನೋಯಿಸರು. ರಾಜಕೀಯ ಅಷ್ಟೊಂದು ಸುಲಭವಲ್ಲ ಎಂಬುದು ತನಗೆ ಗೊತ್ತಿದೆ. 20 ವರ್ಷಗಳಿಂದ ನಾನು ಏಟುಗಳನ್ನು ತಿನ್ನುತ್ತಿದ್ದೇನೆ. ಇಂತವುಗಳಿಗೆ ನಾನು ಒಗ್ಗಿಕೊಂಡಿದ್ದೇನೆ. ನನ್ನ ಭೂತಕಾಲವು ಭವಿಷ್ಯಕ್ಕೆ ಬಣ್ಣಬಳಿಯದು ಎಂಬುದನ್ನು ಇವರಿಗೆ ತಾನು ಸಾಬೀತು ಪಡಿಸುತ್ತೇನೆ" ಎಂದು ಮುನ್ನಭಾಯಿ ಉತ್ತರಿಸಿದರು.ತಾನು ದೆಹಲಿಗೆ ಅಮರ್ ಸಿಂಗ್ ಅವರನ್ನು ಭೇಟಿಯಾಗಲು ತೆರಳಿದ್ದ ವೇಳೆಗೆ ಅವರು ರಾಜಕೀಯಕ್ಕೆ ಸೇರುವಂತೆ ತನಗೆ ಆಹ್ವಾನ ನೀಡಿದರು. ತಾನು ಜನಸೇವೆ ಮಾಡಲು ಸಮರ್ಥನಿರುವ ಕಾರಣ ತಾನು ರಾಜಕೀಯ ಸೇರಬೇಕೆಂದು ತನಗೆ ಅಣ್ಣನಂತಿರುವ ಅಮರ್ ಭಾವಿಸಿದ್ದಾರೆ ಎಂದು ಸಂಜಯ್ ದತ್ ಹೇಳಿದ್ದಾರೆ.ನಿಮ್ಮ ರಾಜಕೀಯ ಪ್ರವೇಶವು ನಿಮ್ಮ ಬಾಕಿಯುಳಿದಿರುವ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಭೀತಿ ಹುಟ್ಟಿದೆಯಲ್ಲಾ ಎಂದಾಗ, "ಇದು ಯಾಕೆಂದು ನಂಗರ್ಥವಾಗುತ್ತಿಲ್ಲ. ನಾನು ಕಡಿಮೆ ಕೆಲಸವನ್ನು ಒಪ್ಪಿಕೊಳ್ಳುತ್ತೇನೆ. ಈ ಹೊಸ ಜವಾಬ್ದಾರಿಯು, ಗುಣಮಟ್ಟದ ಕುರಿತು ನಾನು ಇನ್ನಷ್ಟು ಕಾಳಜಿ ವಹಿಸುವಂತೆ ಮಾಡುತ್ತದೆ. ನಾನು ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದೆ ಮತ್ತು ಸ್ನೇಹಕ್ಕಾಗಿಯೂ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಬೇಡದ ಚಿತ್ರಗಳಿಗೆ ಅಂತ್ಯಹಾಡಲು ರಾಜಕೀಯವು ಒಂದು ಸುವರ್ಣಾವಕಾಶ" ಎಂದು ದತ್ ಹೇಳಿದ್ದಾರೆ. |