ಮಾರಣಾಂತಿಕ ಹಕ್ಕಿಜ್ವರವು ಸಿಕ್ಕಿಂನಲ್ಲಿ ಹರಡುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಕಮ್ಯೂನಿಕೇಬಲ್ ಡಿಸೀಸ್‌ನ ತ್ರಿಸದಸ್ಯರ ತಂಡವನ್ನು ಅಲ್ಲಿಗೆ ಕಳುಹಿಸಿದೆ. ಇದು ಈ ವರ್ಷದಲ್ಲಿ ಎಚ್5ಎನ್1 ವೈರಸ್ ಹಬ್ಬಿರುವ ತೃತೀಯ ರಾಷ್ಟ್ರವಾಗಿದೆ. ಇದೀಗಾಗಲೇ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಈ ರೋಗದಿಂದ ಬಳಲಿದೆ.
ಮೈಕ್ರೋಬಯಾಲಜಿಸ್ಟ್, ಎಪಿಡೆಮಿಯೊಲಾಜಿಸ್ಟ್ ಮತ್ತು ಒರ್ವ ವೈದ್ಯರನ್ನು ಈ ತಂಡವು ಹೊಂದಿದೆ. ಈ ತಂಡವು ಸೋಂಕು ಹರಡಿರುವ ಜಿಲ್ಲೆಗಳಲ್ಲಿ ಮಾನವರನ್ನು ಎಚ್ಚರಿಕೆಯಿಂದ ಗಮನಿಸಲಿದೆ. ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಲಕ್ಷಣಗಳನ್ನು ಪರೀಕ್ಷಿಸಲಾಗುತ್ತಿದೆ. ಇದುವರೆಗೂ ಯಾವುದೇ ಮಂದಿಗೆ ಈ ರೋಗ ತಗುಲಿರುವ ಕುರಿತು ವರದಿಯಾಗಿಲ್ಲ.
ಈಗಾಗಲೇ ಇಲ್ಲಿ 15 ಸಾವಿರ ಪಕ್ಷಿಗಳನ್ನು ವಧಿಸಲಾಗಿದೆ. ರಾವಾಂಗ್ಲ ಪ್ರದೇಶದಲ್ಲಿ ಸುಮಾರು 36 ಹಕ್ಕಿಗಳು ಸತ್ತು ಬಿದ್ದಿವೆ ಎಂಬುದಾಗಿ ಸಚಿವಾಲಯದ ಮೂಲಗಳು ಹೇಳಿವೆ. |