ಮುಂಬೈ ದಾಳಿಯ ಕುರಿತಂತೆ ಪಾಕಿಸ್ತಾನದ ವಿರುದ್ಧ ಕೇಂದ್ರದ ರಾಜತಾಂತ್ರಿಕ ಕ್ರಮವು ಸಂಪೂರ್ಣ ವಿಫಲವಾಗಿದೆ ಎಂದು ಹೇಳಿರುವ ವಿಶ್ವಹಿಂದೂ ಪರಿಷತ್, 'ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕ ರಾಷ್ಟ್ರ'ವನ್ನು ಮುಗಿಸಲು ಯುದ್ಧ ಸಾರಬೇಕು ಎಂದು ಸಲಹೆ ಮಾಡಿದೆ." ಒಂದು ಇಸ್ಲಾಮಿ, ಜಿಹಾದಿ ಭಯೋತ್ಪಾದಕ ರಾಷ್ಟ್ರವಾಗಿರುವ ಪಾಕಿಸ್ತಾನದ ವಿರುದ್ಧ ಭಾರತವು ಯುದ್ಧ ಸಾರಬೇಕು, ಇದರ ಅಸ್ತಿತ್ವವು ಇಡಿಯ ವಿಶ್ವಕ್ಕೆ ಭೀತಿಯಾಗಿ ಪರಿಣಮಿಸಿದೆ" ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಅವರು ಇಲ್ಲಿ ನಡೆದ ಸಮಾರಂಭ ಒಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು." ಇದನ್ನು ಇಸ್ರೇಲ್ ಇಲ್ಲವೇ, ಯುರೋಪ್ ಸಹಾಯದಿಂದ ಮಾಡಬಹುದು, ಆದರೆ ಪಾಕಿಸ್ತಾವನ್ನು ಸಂಪೂರ್ಣ ಧ್ವಂಸಗೊಳಿಸುವುದು ಯುದ್ಧದ ಉದ್ದೇಶವಾಗಬೇಕು. ವೆಚ್ಚ ಹಾಗೂ ಮಾನವ ಜೀವ ನಾಶಕ್ಕೆ ಸಂಬಂಧಿಸಿದಂತೆ ಎಷ್ಟೇ ಬೆಲೆ ತೆತ್ತಾದರೂ ಪಾಕಿಸ್ತಾನವನ್ನು ಪುಡಿಗೈಯುವಂತೆ ನೋಡಿಕೊಳ್ಳಬೇಕು" ಎಂದವರು ಬಹು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ." ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳು ವೈರುಧ್ಯ ಹೇಳಿಕೆಗಳನ್ನು ನೀಡುತ್ತಾ ಭಾರತದ ಕಣ್ಣಿಗೆ ಮಣ್ಣೆರಚುತ್ತಿರುವ ಕಾರಣ ಮುಂಬೈ ದಾಳಿಯ ಬಳಿಕ ಸರ್ಕಾರ ಕೈಗೊಂಡಿರುವ ರಾಜತಾಂತ್ರಿಕ ಪ್ರಯತ್ನಗಳು ಸಂಪೂರ್ಣ ವಿಫಲವಾಗಿದೆ" ಎಂದು ತೊಗಾಡಿಯಾ ಹೇಳಿದ್ದಾರೆ.ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ನವದೆಹಲಿ ಟೀಕಿಸಿರುವ ಕ್ರಮವನ್ನು 'ಅವಿವೇಕ' ಎಂದಿರುವ ಅವರು "ಈ ಯಹೂದಿ ರಾಷ್ಟ್ರವು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಂದು ಪ್ರಮುಖ ಮಿತ್ರರಾಷ್ಟ್ರವಾಗುತ್ತಿತ್ತು ಮತ್ತು ಈ ರಾಷ್ಟ್ರದ ವಿಶ್ವಾಸವನ್ನು ಗೆಲ್ಲಲು ನಾವು ರಾಷ್ಟ್ರೀಯ ಭದ್ರತೆಯ ಕುರಿತು ಅದರ ಕಾಳಜಿಗೆ ಸಹಾನುಭೂತಿ ವ್ಯಕ್ತಪಡಿಸಬೇಕು" ಎಂದು ಅಭಿಪ್ರಾಯಿಸಿದರು.ಭಾರತವು ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಯುರೋಪ್ ಹಾಗೂ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನಿ ವಿರೋಧಿ ಆಡಳಿತವು ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸಹಕರಿಸಲಿದೆ ಎಂದು ಒತ್ತಾಯಿಸಿದರು. |