ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ವೇಳೆಗೆ ಸಣ್ಣಪುಟ್ಟ ಅಡಚಣೆಗಳು ತಲೆದೋರಿದ್ದು, ಇವುಗಳನ್ನು ನಿವಾರಿಸಲು ಮುಂದಾಗಿರುವುದಾಗಿ ಡಿಆರ್‌ಡಿಒ ಹೇಳಿದೆ.
"ನಿನ್ನೆ ಹೊಸ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಪೋಕ್ರಾನ್‌ನಲ್ಲಿ ಪರೀಕ್ಷೆಗೊಳಪಡಿಸುವ ವೇಳೆ ಕೊನೆಯ ಹಂತದಲ್ಲಿ ಸಣ್ಣ ತೊಂದರೆ ಕಾಣಿಸಿಕೊಂಡಿತು ಎಂಬುದಾಗಿ" ಬುಧವಾರದಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಣು ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಸೇನೆಯು ಮಂಗಳವಾರ ಪರೀಕ್ಷಾರ್ಥ ಉಡಾವಣೆ ಮಾಡಿದೆ.
290 ಕಿಲೋ ಮೀಟರ್ ಸಾಮರ್ಥ್ಯದ ಕ್ಷಿಪಣಿಯು, ಶಬ್ದಕ್ಕಿಂತ 2.8 ಪಟ್ಟು ಅಧಿಕ ವೇಗದಲ್ಲಿ ಸಾಗುವ ಕ್ಷಿಪಣಿಯನ್ನು ಅದರ ನೇರ ಮಾದರಿ(ವರ್ಟಿಕಲ್ ಮಾಡೆಲ್)ಯಲ್ಲಿ ಉಡಾಯಿಸಲಾಯಿತು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಶ್ಯಾದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಬ್ರಹ್ಮೋಸ್‌ಗೆ ಬ್ರಹ್ಮಪುತ್ರ ನದಿ ಮತ್ತು ಮಾಸ್ಕೋ ಹೆಸರನ್ನು ಇರಿಸಲಾಗಿದೆ.
ಕಳೆದ ವರ್ಷದಲ್ಲಿ ರಶ್ಯಾದ ರಕ್ಷಣಾ ಸಚಿವ ಅನತೊಲಿ ಸೆರ್ದಿಯುಕೋವ್ ಅವರು ಭಾರತಕ್ಕೆ ಆಗಮಿಸಿದ್ದ ವೇಳೆ ಹೈಪರ್ ಸೋನಿಕ್ ಬ್ರಹ್ಮೋಸ್ ಅಭಿವೃದ್ಧಿ ಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗಾಗಲೇ ಅಭಿವೃದ್ಧಿ ಪಡಿಸಲಾಗಿರುವ ಸೂಪರ್ ಸೋನಿಕ್‌ನ ಸುಧಾರಿತ ಆವೃತ್ತಿಯಾಗಿರುವ ಹೈಪರ್ ಸೋನಿಕ್ 'ಅತ್ಯಂತ ಸುಧಾರಿತ' ಕ್ಷಿಪಣಿಯಾಗಿದೆ. |