ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 5 ಮಂದಿಗೆ ಹೊಸ ಜೀವಕೊಟ್ಟ ಮೃತ ಸೈನಿಕನ ಅಂಗಾಂಗಗಳು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
5 ಮಂದಿಗೆ ಹೊಸ ಜೀವಕೊಟ್ಟ ಮೃತ ಸೈನಿಕನ ಅಂಗಾಂಗಗಳು!
ತನ್ನ ವೈಯಕ್ತಿಕ ನೋವನ್ನು ಮರೆತು ತನ್ನ ಮೃತ ಮೊಮ್ಮಗನ(ಈತನೂ ಸೈನಿಕ) ಅಂಗಾಂಗಗಳನ್ನು ನಿವೃತ್ತ ಸೈನಿಕರೊಬ್ಬರು ಮಾಡಿರುವ ದಾನವು ಮೂವರಿಗೆ ಹೊಸ ಜೀವನ ಮತ್ತು ಇಬ್ಬರಿಗೆ ಹೊಸ ದೃಷ್ಟಿಯನ್ನು ನೀಡಿದೆ.

ನಮ್ಮ ರಾಷ್ಟ್ರದಲ್ಲಿ ಇತರೆಡೆಗೆ ಹೋಲಿಸಿದರೆ, ಅಂಗಾಂಗ ದಾನವು ಅಷ್ಟೊಂದು ಜನಪ್ರಿಯವಾಗಿಲ್ಲದಿದ್ದರೂ, ತಮ್ಮ ಮೃತ ಸಂಬಂಧಿಕರ ಅಂಗಾಂಗಗಳನ್ನು ದಾನ ಮಾಡುವ ಪುಣ್ಯ ಕಾರ್ಯಕ್ಕೆ ಸೇನೆಯಲ್ಲಿ ಸೇವೆಸಲ್ಲಿಸಿರುವವರು ಮುಂದಾಗುತ್ತಿದ್ದಾರೆ.

ಫರಿದಾಬಾದಿನ ರೈಫಲ್‌ಮನ್ ವಿಜಯ್ ಸಿಂಗ್ ಎಂಬವರು ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರ ಮೃತ ದೇಹವನ್ನು ನವದೆಹಲಿಯ ಸೇನಾ ಆಸ್ಪತ್ರೆಗೆ ಅವರ ತಾತ ತಂದಿದ್ದರು. ಈ ವೇಳೆಗೆ ಅವರು ತಮ್ಮ ಮೊಮ್ಮಗನ ಎರಡು ಕಿಡ್ನಿಗಳು, ಲಿವರ್ ಮತ್ತು ಎರಡು ಕಣ್ಣುಗಳನ್ನು ದಾನ ಮಾಡಿದ್ದರು. ಇದರಿಂದಾಗಿ ಮೂರು ವ್ಯಕ್ತಿಗಳ ಜೀವ ಉಳಿಸಲಾಯಿತು ಮತ್ತು ಇಬ್ಬರು ಹೊಸ ದೃಷ್ಟಿಯನ್ನು ಪಡೆಯುಂತಾಯಿತು ಎಂಬುದಾಗಿ ಆಸ್ಪತ್ರೆಯ ಆಡಳಿತ ಮುಖ್ಯಸ್ಥ ಬ್ರಿಗೇಡಿಯರ್ ಎ.ಕೆ. ಶರ್ಮ ತಿಳಿಸಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 15ರ ಹರೆಯ ಬಾಲಕನಿಗೆ ಲಿವರ್ ಜೋಡಿಸಲಾಗಿದೆ. ಕಿಡ್ನಿಯೊಂದನ್ನು ಸೈನಿಕನೊಬ್ಬನ ತಾಯಿಗೂ ಮತ್ತೊಂದು ಕಿಡ್ನಿಯನ್ನು ಎಐಐಎಂಎಸ್‌ನ ಆರ್ಗನ್ ರಿಟ್ರೈವಲ್ ಆಂಡ್ ಬ್ಯಾಂಕಿಂಗ್ ಆರ್ಗನೈಸೇಶನ್‌ಗೆ ಹಸ್ತಾಂತರಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಮೃತ ವಿಜಯ್ ಸಿಂಗ್ ಅವರ ಕುಟುಂಬವು ತಾವು ಕುಲಕೋಟಿಗೆ ಯಾವ ರೀತಿಯಲ್ಲಿ ಹೇಗೆ ದಯಾಳುವಾಗಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ನೀಡಿದೆ. ಅವರ ನಿಸ್ವಾರ್ಥ ಕ್ರಮವು ಅಂಗಾಂಗ ದಾನ ಹಾಗೂ ಮಾನಕೋಟಿಗೆ ಅದರ ಪ್ರಯೋಜನವನ್ನು ತಿಳಿಸಿಕೊಟ್ಟಂತಾಗಿದೆ ಎಂದು ಶರ್ಮಾ ಹೊಗಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ಕರೆ, ಓಂಬಳೆಗೆ ಮಾತ್ರ ಅಶೋಕ ಚಕ್ರ
ಬೆಂಗಳೂರು ಸ್ಫೋಟ ಶಂಕಿತ ನ್ಯಾಯಾಲಯಕ್ಕೆ ಹಾಜರಿ
ಬ್ರಹ್ಮೋಸ್‌ ಕ್ಷಿಪಣಿಯಲ್ಲಿ ಸಣ್ಣಪುಟ್ಟ ಅಡಚಣೆ
ಮದರಸದಲ್ಲಿ ಹಿಂದೂ ವಿದ್ಯಾರ್ಥಿಗಳೇ ಹೆಚ್ಚು!
ಫಿನಿಶ್ ಪಾಕಿಸ್ತಾನ್: ತೊಗಾಡಿಯಾ ಗುಡುಗು
ಕೋರ್ಟ್ ಸ್ನೇಹಿಯಾಗಲೊಲ್ಲೆ: ಫಾಲಿ ನಾರಿಮನ್