ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್ ಭಯೋತ್ಪಾದನಾ ಪ್ರಾಯೋಜಕ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಭಯೋತ್ಪಾದನಾ ಪ್ರಾಯೋಜಕ: ಪ್ರಣಬ್
ಪಾಕಿಸ್ತಾನವು ಇನ್ನೂ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬ ಗಂಭೀರ ಆರೋಪವನ್ನು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮಾಡಿದ್ದಾರೆ.

ನವದೆಹಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿಕಲಿಸಬೇಕು ಎಂದು ನುಡಿದರು.

ಮುಂಬೈ ದಾಳಿಯನ್ನು ಅಮೆರಿಕದ ವಿಶ್ವವ್ಯಾಪಾರ ಕೇಂದ್ರದ ಮೇಲಿನ ದಾಳಿಗೆ ಸಮೀಕರಿಸಿದ ಪ್ರಣಬ್, ಭಯೋತ್ಪಾದನಾ ನಕಾಶೆಯನ್ನು ಸೋಲಿಸಬೇಕು ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

9/11ರ ಭಯೋತ್ಪಾದನಾ ದಾಳಿಯ ತೀವ್ರತೆಯನ್ನು ಮುಂಬೈದಾಳಿ ರೂಪತಾಳಿದೆ. ತಮ್ಮ ಪ್ರಾಂತ್ಯವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಸಮುದಾಯವು ಶಿಸ್ತಿಗೊಳಪಡಿಸಲು ಈಗ ಕಾಲ ಪಕ್ವವಾಗಿದೆ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆಗೂ ಕಾಶ್ಮೀರ ವಿವಾದಕ್ಕೂ ಸಂಬಂಧ ಕಲ್ಪಿಸಿ, ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಂದ್ ಅವರು ನೀಡಿರುವ ವಿವಾದಾಸ್ಪದ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಣಬ್, ಈ ವಿಚಾರವನ್ನು ನಿರಾಕರಿಸಿರುವುದಾಗಿ ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಸಂದೇಶ ರವಾನಿಸಿರುವುದಾಗಿ ಮತ್ತು ಈ ವಿಚಾರವನ್ನು ಮುಗಿದ ಅಧ್ಯಾಯವೆಂದು ಪರಿಗಣಿಸುವುದಾಗಿ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
5 ಮಂದಿಗೆ ಹೊಸ ಜೀವಕೊಟ್ಟ ಮೃತ ಸೈನಿಕನ ಅಂಗಾಂಗಗಳು!
ಕರ್ಕರೆ, ಓಂಬಳೆಗೆ ಮಾತ್ರ ಅಶೋಕ ಚಕ್ರ
ಬೆಂಗಳೂರು ಸ್ಫೋಟ ಶಂಕಿತ ನ್ಯಾಯಾಲಯಕ್ಕೆ ಹಾಜರಿ
ಬ್ರಹ್ಮೋಸ್‌ ಕ್ಷಿಪಣಿಯಲ್ಲಿ ಸಣ್ಣಪುಟ್ಟ ಅಡಚಣೆ
ಮದರಸದಲ್ಲಿ ಹಿಂದೂ ವಿದ್ಯಾರ್ಥಿಗಳೇ ಹೆಚ್ಚು!
ಫಿನಿಶ್ ಪಾಕಿಸ್ತಾನ್: ತೊಗಾಡಿಯಾ ಗುಡುಗು