ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಿಲಿಬಂದ್ ಹೇಳಿಕೆ: ಪ್ರಧಾನಿ ಪತ್ರ ಬರೆದಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿಲಿಬಂದ್ ಹೇಳಿಕೆ: ಪ್ರಧಾನಿ ಪತ್ರ ಬರೆದಿಲ್ಲ
ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಂದ್ ಅವರು ಕಾಶ್ಮೀರ ವಿವಾದಕ್ಕೂ 26/11ರ ಭಯೋತ್ಪಾದನಾ ಘಟನೆಗೂ ತಳುಕು ಹಾಕಿರುವುದರಿಂದ ನಿರಾಸೆಯಾಗಿದೆ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಅವರಿಗೆ ಪತ್ರ ಬರೆದಿದ್ದಾರೆ ಎಂಬುದನ್ನು ಪ್ರಧಾನಿ ಕಚೇರಿ ಸ್ಪಷ್ಟವಾಗಿ ತಳ್ಳಿಹಾಕಿದೆ.

ಲಷ್ಕರ್-ಇ-ತೋಯ್ಬಾವು ತನ್ನ ಉದ್ದೇಶ ಕಾಶ್ಮೀರ ಎಂದಿರುವ ಕಾರಣ ಕಾಶ್ಮೀರ ವಿವಾದವನ್ನು ಪರಿಹರಿಸಬೇಕು ಎಂದು ಮಿಲಿಬಂದ್ ಹೇಳಿರುವುದು ಭಾರತಕ್ಕೆ ಇರಿಸುಮುರಿಸುಂಟುಮಾಡಿತ್ತು.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಿಲಿಬಂದ್ ದಿ ಗಾರ್ಡಿಯನ್ ದೈನಿಕಕ್ಕೆ ಬರೆದಿರುವ ಲೇಖನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವ ಮೂಲಕ ಈ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರ ಸಂಗ್ರಹದ ಗುರಿ ಹೊಂದಿರುವ ಉಗ್ರವಾದಿಗಳನ್ನು ನಿರಾಕರಿಸಲು ಸಹಕರಿಸಬಹುದು ಮತ್ತು ತನ್ನ ಪಶ್ಚಿಮ ಗಡಿಗಳಲ್ಲಿನ ಭೀತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು ಪಾಕಿಸ್ತಾನ ಪ್ರಾಧಿಕಾರಕ್ಕೆ ಅನುವು ನೀಡಬಹುದು ಎಂದು ಹೇಳಿದ್ದರು.

ಮಿಲಿಂದ್ ಅಭಿಪ್ರಾಯವು ಅನಗತ್ಯ ಎಂದು ಹೇಳಿರುವ ವಿದೇಶಾಂಗ ಸಚಿವಾಲಯ ಜಮ್ಮು ಕಾಶ್ಮೀರವು ನಮ್ಮ ಆಂತರಿಕ ವಿಚಾರವಾಗಿದೆ ಎಂದು ಹೇಳಿದೆ.

ಇದರ ಪ್ರತಿಭಟನಾರ್ಥವಾಗಿ ಭಾರತ ಭೇಟಿಯಲ್ಲಿರುವ ಬ್ರಿಟಿಶ್ ವಿದೇಶಾಂಗ ವಾಣಿಜ್ಯ ಕಾರ್ಯದರ್ಶಿಗೆ ಪ್ರಧಾನಿ ಹಾಗೂ ವಿದೇಶಾಂಗ ಸಚಿವರ ಭೇಟಿಯನ್ನು ನಿರಾಕರಿಸಲಾಗಿದೆ ಎಂದೂ ಹೇಳಲಾಗಿತ್ತು.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿರುವ ಮಿಲಿಬಂಗ್ ಅವರನ್ನು ಜತೆಯಾಗಿರಿಸಿಕೊಂಡು ಕಾಂಗ್ರೆಸ್ ಪ್ರಧಾನ ಕಾರ್ಯದರ್ಷಿ ರಾಹುಲ್ ಗಾಂಧಿ ತನ್ನ ಅಮೇಠಿ ಕ್ಷೇತ್ರದಲ್ಲಿ ಗ್ರಾಮವಾಸ ಮಾಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೇಂದ್ರ ಸಚಿವ ಭರವಸೆ
'ಎಸ್ಪಿ'ಗೆ ಕಲ್ಯಾಣ್ ಸಿಂಗ್
ಪಾಕ್ ಭಯೋತ್ಪಾದನಾ ಪ್ರಾಯೋಜಕ: ಪ್ರಣಬ್
5 ಮಂದಿಗೆ ಹೊಸ ಜೀವಕೊಟ್ಟ ಮೃತ ಸೈನಿಕನ ಅಂಗಾಂಗಗಳು!
ಕರ್ಕರೆ, ಓಂಬಳೆಗೆ ಮಾತ್ರ ಅಶೋಕ ಚಕ್ರ
ಬೆಂಗಳೂರು ಸ್ಫೋಟ ಶಂಕಿತ ನ್ಯಾಯಾಲಯಕ್ಕೆ ಹಾಜರಿ