ಪಕ್ಷದೊಳಗೆ ಬಂಡಾಯಕ್ಕೆ ಅವಕಾಶ ನೀಡಬಾರದು ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಮುಂಬರುವ ಚುನಾವಣೆಗೆ ಟಿಕೆಟ್ ವಿತರಣೆಗೆ ಮುಂಚಿತವಾಗಿ ಪಕ್ಷದ ಕಾರ್ಯಕರ್ತರ ಉತ್ತರದಾಯಿತ್ವವನ್ನು ನಿರ್ಧರಿಸಿ, ಚುನಾವಣೆ ಮುಂಚಿತವಾಗಿ ಸಂಭಾವ್ಯ ಬಂಡುಕೋರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.ಪಕ್ಷಕ್ಕಾಗಿ ದುಡಿಯುತ್ತಿರುವವರು ಮತ್ತು ಪಕ್ಷಕ್ಕೆ ಹಾನಿಯುಂಟುಮಾಡುವವರನ್ನು ಏಕರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಪಕ್ಷದ ಬಲಹೀನತೆಗಳಲ್ಲಿ ಒಂದು ಎಂದು ಹೇಳಿದ್ದಾರೆ." ಹಮಾರಿ ಪಾರ್ಟಿ ಮೇ ಏಕ್ ಕಮಿ ಹೈ ಕಿ ಜೋ ಕಾಮ್ ಕರ್ತಾ ಹೈ, ಜೋ ನುಕ್ಸಾನ್ ಕರ್ತಾ ಹೈ... ಉಸೇ ಹಮ್ ಏಕ್ ನಜರ್ ಸೆ ದೇಕ್‌ತೇ ಹೈ(ಪಕ್ಷಕ್ಕಾಗಿ ಶ್ರಮಿಸುವವರನ್ನು ಮತ್ತು ಪಕ್ಷಕ್ಕೆ ಹಾನಿಯುಂಟು ಮಾಡುವವರನ್ನು ನಾವು ಒಂದೇ ದೃಷ್ಟಿಯಿಂದ ನೋಡುತ್ತೇವೆ)" ಎಂದು ಗಾಂಧಿ ಹೇಳಿದ್ದಾರೆ. ಅವರು ಅಶೋಕ್ ಗೆಹ್ಲೋಟ್ ನೇತೃತ್ವ ಸರ್ಕಾರ ನೇಮಕದ ಬಳಿಕ ಪ್ರಥಮ ಸಭೆಯಲ್ಲಿ ಮಾತನಾಡುತ್ತಿದ್ದರು. ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು, ಶಾಸಕರು ಮತ್ತು ಸಂಸದರು ಹಾಜರಿದ್ದರು.ಯಾವುದೇ ಚುನಾವಣೆಯ ಸಂದರ್ಭದಲ್ಲಿಯೂ ಟಿಕೆಟ್ ವಿತರಣೆಯ ಸೂಕ್ತ ಸಂದರ್ಭದಲ್ಲಿ ಅಭ್ಯರ್ಥಿಗಳ ಉತ್ತರದಾಯಿಯನ್ನು ನಿರ್ಧರಿಸಬೇಕು ಎಂದು ಅವರು ನುಡಿದರು.ಮುಂದಿನ ಲೋಕಸಭಾ ಚುನಾವಣೆಗಳಲ್ಲಿ '25 ಸ್ಥಾನಗಳ ಗುರಿ' ಎಂಬ ಉದ್ದೇಶ ಹಮ್ಮಿಕೊಳ್ಳಲಾಗಿರುವ ಸಭೆಯಲ್ಲಿ, ಯಾರು ಪಕ್ಷಕ್ಕಾಗಿ ದುಡಿಯುತ್ತಾರೆ ಮತ್ತು ಯಾರು ಪಕ್ಷಕ್ಕಾಗಿ ದುಡಿಯುವುದಿಲ್ಲ ಎಂಬುದು ನಮಗೆಲ್ಲರಿಗೆ ಗೊತ್ತಿದೆ. ಉತ್ತರದಾಯಿತ್ವವನ್ನು ಚುನಾವಣೆಗಳ ಘೋಷಣೆಗೆ ಮುಂಚಿತವಾಗಿ ನಿರ್ಧರಿಸಬೇಕೇ ವಿನಹ ನಂತರದಲ್ಲಿ ಅಲ್ಲ ಎಂದು ರಾಹುಲ್ ಹೇಳಿದರು.ಪಂಜಾಬ್ ಮತ್ತು ಉತ್ತರಖಂಡ್‌ನಲ್ಲಿ ಎನ್ಎಸ್ಐಯು ಮತ್ತು ಯುವ ಕಾಂಗ್ರೆಸ್‌ಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಯುವಕರಿಗೆ ಕರೆ ನೀಡಿದ ಅಮೇಠಿ ಸಂಸದ, ಹಳ್ಳಿಗಳಿಗೆ ತೆರಳಿ ಯುಪಿಎ ಸರ್ಕಾರವು ಘೋಷಿಸಿರುವ ಹಲವು ಯೋಜನೆಗಳಡಿ ಬಡವರಿಗೆ ಸಹಾಯ ಮಾಡಲು ಮುಂದಾಗುವಂತೆ ಒತ್ತಾಯಿಸಿದರು. |