ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಹಿಂದೂ ರಾಷ್ಟ್ರ' ಮಾಲೆಗಾಂವ್ ರೂವಾರಿಗಳ ಉದ್ದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹಿಂದೂ ರಾಷ್ಟ್ರ' ಮಾಲೆಗಾಂವ್ ರೂವಾರಿಗಳ ಉದ್ದೇಶ
ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತುವ ಉದ್ದೇಶದಿಂದ ಭೂಗತ ಸಂಸ್ಥೆಯೊಂದನ್ನು ಹುಟ್ಟುಹಾಕಲು, ಮಾಲೆಗಾಂವ್ ಸ್ಫೋಟದ ರೂವಾರಿಗಳು ಯೋಜಿಸಿದ್ದರು ಮತ್ತು 2007ರಲ್ಲಿ ನಡೆದಿದ್ದ ಸಭೆಯಲ್ಲಿ ಮಾಜಿ ಬಿಜೆಪಿ ಸಂಸದ ಹಾಗೂ ಬಿ.ಎಲ್. ಶರ್ಮಾ ಅವರು ಈ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮಹಾರಾಷ್ಟ್ರ ಎಟಿಎಸ್ ಮೋಕಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಪ್ಯಂತರ ಒಂದರಲ್ಲಿ, ಪೊಲೀಸರು ಮಾಜಿ ಬಿಜೆಪಿ ನಾಯಕ ಎಂದು ಹೇಳಿರುವ ವ್ಯಕ್ತಿಯೋರ್ವ, ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಭೂಗತ ಚಳುವಳಿಯನ್ನು ರೂಪಿಸುವ ಅಗ್ಯವಿದೆ ಎಂಬುದಾಗಿ ಈ ಫಿತೂರಿಗಾರರಿಗೆ ಹೇಳುತ್ತಿರುವುದು ದಾಖಲಾಗಿದೆ.

"ನಾವು ಕ್ರಾಂತಿಯ ಬೀಜವನ್ನು ಬಿತ್ತಬೇಕು" ಎಂಬುದಾಗಿ ಶರ್ಮಾ ಅವರು ಬಂಧಿತ ಆರೋಪಿಗಳಾದ ಲೆಫ್ಟಿನೆಂಟ್ ಕರ್ನಲ್ ಪಿ.ಎಸ್.ಪುರೋಹಿತ್ ಹಾಗೂ ಸ್ವಯಂಘೋಷಿತ ಸ್ವಾಮಿ ದಯಾನಂದ ಪಾಂಡೆ ಭಾಗವಹಿಸಿದ್ದ ಸಭೆಯೊಂದರಲ್ಲಿ ಹೇಳಿದ್ದಾರೆ.

ಪಾಂಡೆಯ ಲ್ಯಾಪ್‌ಟಾಪ್‌ನಲ್ಲಿ ಲಭ್ಯವಾಗಿರುವ 2007ರ ಆ ಸಭೆಯ ವಿಡಿಯೋ ಚಿತ್ರದ ಆಧಾರದಿಂದ ಈ ಲಿಪಿಯನ್ನು ತಯಾರಿಸಲಾಗಿದೆ. ಇದು ಯಾರಿಗೂ ತಿಳಿಯಬಾರದು ಮತ್ತು ಕೆಲವು ವ್ಯಕ್ತಿಗಳು ಇದರ ಉಸ್ತುವಾರಿ ವಹಿಸಿಕೊಳ್ಳಬೇಕು ಹಾಗೂ ಸಂಘಟನೆಗೆ ಜನರನ್ನು ಸೇರಿಸಿಕೊಳ್ಳಬೇಕು ಎಂದು ಶರ್ಮಾ ಸಭೆಯಲ್ಲಿ ಹೇಳಿದ್ದಾರೆ.

"ಇದಕ್ಕೆ ನಾಲ್ಕರಿಂದ ಐದು ವರ್ಷ ಹಿಡಿಯಬಹುದು. ಸಾರ್ವಜನಿರ ದೃಷ್ಟಿಯಿಂದ ಸಂಘಟನೆಯ ವ್ಯಕ್ತಿಗಳನ್ನು ದೂರ ಇರಿಸಲು ಹಣ ಉಳಿಸಬೇಕು. ನಾವು ಮೊದಲೆ ಪೂರ್ವತಯ್ಯಾರಿ ನಡೆಸಬೇಕು. ಈ ಸಂಘಟನೆಗೆ ಹೆಸರಿಡಬೇಕು. ಉದಾಹರಣೆಗೆ ನಾವು ಪಿನ್‌ಕೋಡ್ ಅಥವಾ ಅದರ ಹೆಸರಿನ ಸಂಕೇತವನ್ನು ಇರಿಸಿಕೊಳ್ಳಬಹುದು" ಎಂದು ಅವರು ಸಲಹೆ ನೀಡಿದ್ದಾರೆ.

"ನಾವು ಎರಡು ಸಂಘಟನೆಗಳನ್ನು ಹುಟ್ಟುಹಾಕುವ ಅವಶ್ಯಕತೆ ಇದೆ. ಒಂದು ಸಂಘಟನೆಗೆ ಸಾಮಾಜಿಕ ಮುಖವಿದ್ದರೆ, ಇನ್ನೊಂದು ಶಕ್ತಿಶಾಲಿ ಭೂಗತ ಸಂಘಟನೆಯಾಗಬೇಕು. 'ನಾವು ಈ ರಾಷ್ಟ್ರದ ಸಂವಿಧಾನವನ್ನು ಒಪ್ಪುವುದಿಲ್ಲ.. ಮತ್ತು ನಾವು ಈ ಕುರಿತು ಹೋರಾಡಬೇಕು' ಎಂಬುದರಲ್ಲಿ ಯಾವುದೇ ಸಂಶಯವಿಲ್ಲ" ಎಂಬುದಾಗಿ ಸಭೆಯಲ್ಲಿ ಪುರೋಹಿತ್ ಹೇಳಿದ್ದಾರೆ ಎಂಬುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಹೇಳಲಾಗಿದೆ.

ಮೂರುವರ್ಷಗಳಲ್ಲಿ ಈ ಹೋರಾಟವನ್ನು ಅಂತಾರಾಷ್ಟ್ರೀಯವಾಗಿ ಹಮ್ಮಿಕೊಳ್ಳಬೇಕು ಎಂದು ಪುರೋಹಿತ್ ಹೇಳಿರುವುದಾಗಿ ಮತ್ತು ಇತರರಾಷ್ಟ್ರಗಳ ಸಹಯೋಗಕ್ಕಾಗಿ ಇದೀಗಾಗಲೇ ಪ್ರಯತ್ನಗಳು ನಡೆದಿವೆ ಎಂದೂ ಲಿಪ್ಯಂತರದಲ್ಲಿ ಹೇಳಲಾಗಿದೆ.

ಭಾಯೈ ದಾಲ್ವಿ ಎಂದು ಗುರುತಿಸಲಾಗಿರುವ ಇನ್ನೊಬ್ಬ ವ್ಯಕ್ತಿ ಸಭೆಯಲ್ಲಿ ಪಾಲ್ಗೊಂಡಿದ್ದು, "ರಾಷ್ಟ್ರಾದ್ಯಂತ ಹಲವಾರು ಸ್ಫೋಟಗಳನ್ನು ನಡೆಸಲು ಸಲಹೆ ನೀಡಿರುವುದಾಗಿ ಹೇಳಲಾಗಿದೆ. "ಇದು ಲಕ್ಷಾಂತರ ಮಂದಿಯ ಮೇಲೆ ಪರಿಣಾಮ ಬೀರುತ್ತದಲ್ಲದೆ, ಇತರ ಧರ್ಮದ ಜನತೆಯನ್ನು ಹಿಂದುತ್ವಕ್ಕೆ ಪರಿವರ್ತಿಸಲು ಉತ್ತೇಜನ ನೀಡುತ್ತದೆ. ಅವರಲ್ಲಿ ಭಯ ಹುಟ್ಟಿಸಿದರೆ ಮಾತ್ರ ಅವರು ನಮ್ಮ ಕಾಲಿಗೆ ಬೀಳುತ್ತಾರೆ" ಎಂದು ದಾಲ್ವಿ ಅಭಿಪ್ರಾಯಿಸಿರುವುದಾಗಿ ಹೇಳಲಾಗಿದೆ.

ಈ ಯೋಜನೆಯು ಅನ್ಯ ಧರ್ಮಗಳಿಗೆ ಮತಾಂತರ ಹೊಂದಿದವರು ತಮ್ಮ ಮಾತೃಧರ್ಮಕ್ಕೆ ಮರುಕಳಿಸುವಂತೆ ಮಾಡುತ್ತದೆ ಮತ್ತು ಇಡಿಯ ರಾಷ್ಟ್ರವೇ ಹಿಂದೂ ರಾಷ್ಟ್ರವಾಗುತ್ತದೆ ಎಂದು ಸಭೆಯನ್ನು ದಾಖಲಿಸಿರುವ ಪಾಂಡೆ ಹೇಳಿದ್ದಾರೆನ್ನಲಾಗಿದೆ.

ಮಾಲೆಗಾಂವ್ ಸ್ಫೋಟಕ್ಕೆ ಸಂಬಧಿಸಿದಂತೆ 14 ಆರೋಪಿಗಳ ವಿರುದ್ಧ ಎಟಿಎಸ್ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸ್ಫೋಟದಲ್ಲಿ ಆರು ಮಂದಿ ಸತ್ತಿದ್ದು, 100 ಮಂದಿ ಗಾಯಗೊಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಡಾಯಕ್ಕೆ ಆಸ್ಪದ ನೀಡಬಾರದು: 'ಮರಿಗಾಂಧಿ'
ಆ ರಕ್ತಸಿಕ್ತ ರಾತ್ರಿಯಂದು ಎಲ್ಲಿದ್ದರು ಈ ಉನ್ನತರು?
6,000 ಖೊಟ್ಟಿ ವೇತನ ಖಾತೆ ತೆರೆದಿದ್ದ ವಂಚಕ ರಾಜು?
'ಮಿಲಿಬಂದ್ ಹೇಳಿಕೆಯಿಂದ ನಮಗೆ ಭ್ರಮನಿರಸನವಾಗಿದೆ'
ಕೇಂದ್ರ ಸಚಿವ ಭರವಸೆ
'ಎಸ್ಪಿ'ಗೆ ಕಲ್ಯಾಣ್ ಸಿಂಗ್