ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟ(ಯುಪಿಎ)ವು ಗೆದ್ದು ಬಂದರೆ ಯಾರು ಪ್ರಧಾನಿಯಾಗಬೇಕು ಎಂಬ ವಿಚಾರದಲ್ಲಿ ಮಿತ್ರರೊಳಗೆ ಭಿನ್ನಾಭಿಪ್ರಾಯವಿರುವ ಕಾರಣ ಕೂಟದೊಳಗೆ ಒಡಕುಂಟಾಗಿರುವಂತೆ ತೋರುತ್ತಿದೆ.
ಯುಪಿಎಯ ಪ್ರಧಾನ ಮಿತ್ರವಾಗಿರುವ ಎನ್‌ಸಿಪಿಯು ತನ್ನ ನಾಯಕ ಶರದ್ ಪವಾರ್ ಅವರನ್ನು ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂದು ನಿರ್ಧರಿಸಿದೆ.
ಈ ಕುರಿತು ಗುರುವಾರದ ಎನ್‌ಸಿಪಿ ಕಾರ್ಯಕಾರಿಣಿಯಲ್ಲಿ ನಿರ್ಧಾರ ಒಂದನ್ನು ಕೈಗೊಳ್ಳುವ ಸಂಭವವಿದೆ.
ಆದರೆ, ಎನ್‌ಸಿಪಿಯ ಈ ಆಸೆಗೆ ಬಲವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪಕ್ಷದ ಬೇಡಿಕೆಯನ್ನು ಬಲವಾಗಿ ವಿರೋಧಿಸಿದೆ.
ಅನುಪಾತ ಬಲದನ್ವಯ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ವಿಫಲವಾದರೆ, ಇತರ ಜಾತ್ಯತೀತ ಪಕ್ಷಗಳೊಂದಿಗೆ ಮಾತುಕತೆ ನಡೆಸುವುದಾಗಿಯೂ ಎನ್‌ಸಿಪಿ ಬೆದರಿಕೆ ಹಾಕಿದೆ. |