ಪಾಟ್ನಾ: ಪಾಟ್ನಾದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸಬಿಸಾಡುವವರಿನ್ನು 500 ರೂಪಾಯಿ ದಂಡ ಕಕ್ಕಬೇಕಾಗುತ್ತದೆ. ಇಲ್ಲಿನ ನಗರಾಭಿವೃದ್ಧಿ ಇಲಾಖೆಯು ಆರಂಭಿಸಿರುವ ಸ್ವಚ್ಛತಾ ಆಂದೋಲನದಡಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಈ ಅಧಿಸೂಚನೆಯಡಿ ನಗರದ ಸುಮಾರು ಎಂಟು ರಸ್ತೆಗಳು ಒಳಪಡುತ್ತವೆ. ಒಂದೊಮ್ಮೆ ಎರಡನೇ ಬಾರಿ ಸಿಕ್ಕಿಬಿದ್ದರಂತೂ ಇನ್ನಷ್ಟು ಕಠಿಣ ಕ್ರಮಕ್ಕೊಳಬೇಕಾಗುತ್ತದೆ. ಇಂಥವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಯೋಜನೆಯ ಉದ್ದೇಶವು ತಪ್ಪಿತಸ್ಥರನ್ನು ಶಿಕ್ಷಿಸುವ ಉದ್ದೇಶವಲ್ಲ, ಬದಲಿಗೆ ಜನತೆಯಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ನಗರಾಭಿವೃದ್ಧಿ ಸಚಿವರು ಸ್ಪಷ್ಟಪಡಿಸಿದ್ದಾರೆ. |