ಬಿಜೆಪಿಗೆ ಟಾಟಾ ಹೇಳಿ ಸಮಾಜವಾದಿ ಪಕ್ಷ(ಎಸ್ಪಿ)ವನ್ನು ಅಪ್ಪಿಕೊಂಡಿರುವ ಕಲ್ಯಾಣ್ ಸಿಂಗ್‌ಗೆ ಪಕ್ಷದಲ್ಲಿ ಸಿಗುತ್ತಿರುವ ಪ್ರಾಧಾನ್ಯತೆಯು ಇದೀಗಾಗಲೆ ದುರ್ಬಲಗೊಳ್ಳುತ್ತಿರುವ ಎಸ್ಪಿ-ಕಾಂಗ್ರೆಸ್ ನಡುವಿನ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದ್ದು, ಕಾಂಗ್ರೆಸ್‌ನ ಪ್ರಧಾನ ವಿಭಾಗವೊಂದು ಈ ಕುರಿತು ಮರುನೋಟ ಹರಿಸುವಂತೆ ಕರೆ ನೀಡುವಂತೆ ಒತ್ತಾಯಿಸುತ್ತಿದೆ ಎನ್ನಲಾಗಿದೆ.
ಬಾಬರ್ ಮಸೀದಿ ಧ್ವಂಸಗೊಳಿಸಿದ ವೇಳೆ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಇದರಿಂದಾಗಿ ಮುಸ್ಲಿಂ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕಾಂಗ್ರೆಸ್ ಚಿಂತೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಎಸ್ಪಿ ಪ್ರಯತ್ನಿಸುತ್ತಿರುವಾಗಲೇ ಕಲ್ಯಾಣ್ ಸಿಂಗ್ ಒಂದು ಹೊಸತೊಡಕಾಗಿ ಪರಿಣಮಿಸಿದ್ದಾರೆ. |