ಸತ್ಯಂ ಹಗರಣದ ಕುರಿತು ಆಂಧ್ರಪ್ರದೇಶದ ಸಿಬಿ-ಸಿಐಡಿಯು ನಡೆಸುತ್ತಿರುವ ತನಿಖೆಯು ಶೇರುದಾರರಲ್ಲಿ ಯಾವುದೆ ನಂಬುಗೆ ಹುಟ್ಟಿಸುವಲ್ಲಿ ವಿಫಲವಾಗಿರುವ ಕಾರಣ ಸಮಗ್ರ ಸ್ವತಂತ್ರ ತನಿಖೆ ನಡೆಸಬೇಕು ಎಂದು ಭಾರತೀಯ ಜನತಾಪಕ್ಷವು ಗುರವಾರ ಒತ್ತಾಯಿಸಿದೆ." ದುರದೃಷ್ಟವಶಾತ್ ಸಿಬಿ-ಸಿಐಡಿಯು ನಡೆಸುತ್ತಿರುವ ತನಿಖೆಯು ಶೇರುದಾರರಲ್ಲಿ ಯಾವುದೆ ನಂಬುಗೆ ಹುಟ್ಟಿಸುವಲ್ಲಿ ವಿಫಲವಾಗಿದೆ. ಹಗರಣದ ಕುರಿತು ಸಮಗ್ರ ಸ್ವತಂತ್ರ ತನಿಖೆ ಅಥವಾ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲು ಬಿಜೆಪಿ ಒತ್ತಾಯಿಸುತ್ತದೆ" ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವೇಡ್ಕರ್ ವರದಿಗಾರರಿಗೆ ತಿಳಿಸಿದ್ದಾರೆ.ಇದರಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಮೊತ್ತವನ್ನು ದುರ್ವವ್ಯಯ ಮಾಡಲಾಗಿದೆ ಮತ್ತು ರಾಷ್ಟ್ರವನ್ನು ವಂಚಿಸಲಾಗಿದೆ. ಸಂಸತ್ ಅವಧಿಯು ಮುಗಿಯುತ್ತ ಬಂದಿರುವ ಕಾರಣ ತಜ್ಞರ ತಂಡದ ಸ್ವತಂತ್ರ ತನಿಖೆಯು ಹೆಚ್ಚು ಸೂಕ್ತ ಎಂದು ಅವರು ಅಭಿಪ್ರಾಯಿಸಿದರು.ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಹಾಗೂ ಮೇತಾಸ್ ನಡುವಿನ ಸಂಬಂಧದ ತನಿಖೆಯಾಗಬೇಕಿದೆ. ಮೆಟ್ರೋ ರೈಲು ಯೋಜನೆ ಮಾತ್ರವಲ್ಲದೆ, ಸಂಸ್ಥೆಗೆ ನೀಡಲಾಗಿರುವ ವಿವಿಧ ನಿರಾವರಿ ಯೋಜನೆಗಳು, ವಿಶೇಷ ಆರ್ಥಿಕ ವಲಯಗಳು, ಉದಾರವಾಗಿ ಮಾಡಲಾಗಿರುವ ಭೂ ಮಂಜೂರಾತಿ ಇವುಗಳ ಎಲ್ಲ ತನಿಖೆ ಆಗಬೇಕಿದೆ" ಎಂದವರು ಒತ್ತಾಯಿಸಿದ್ದಾರೆ.ಸತ್ಯಂ ಮತ್ತು ಮೇತಾಸ್ ನಡುವೆ ಹೇಗೆ ಹಣ ಹರಿದುಹೋಗಿದೆ ಎಂಬುದನ್ನು ತಿಳಿಯುವ ಹಕ್ಕು ರಾಷ್ಟ್ರಕ್ಕಿದೆ. ಮೇತಾಸ್‌ನ ನಿಜವಾದ ಫಲಾನುಭವಿಗಳು ಯಾರು? ಪಿಎನ್ ಅಥವಾ ಮಾರಿಶಸ್ ಮಾರ್ಗವನ್ನು ಬಳಸಲಾಗಿದೆಯೇ ಎಂಬುದು ಪತ್ತೆಯಾಗುವ ಅವಶ್ಯಕತೆ ಇದೆ ಎಂದೂ ಅವರು ಹೇಳಿದ್ದಾರೆ. |